ಕಿಡಿಗೇಡಿಗಳು, ಲೀಕಾಸುರರ ಹಾವಳಿ ಸಿನಿಮಾಗಳ ಮೇಲೆ ಬೀರುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಥಿಯೇಟರ್ ನಲ್ಲಿ ಸಿನಿಮಾಗಳನ್ನು ವಿಡಿಯೋ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ವಿಕೃತರಿದ್ದಾರೆ. ಈಗಾಗಲೇ ಬಹಳಷ್ಟು ಹಿಟ್ ಸಿನಿಮಾಗಳನ್ನು ತೆರೆ ಕಾಣುವುದಕ್ಕೆ ಮುಂಚೆಯೇ ಪ್ರೇಕ್ಷಕರಿಗೆ ತೋರಿಸಿರುತ್ತಾರೆ. ಇದೀಗ ಅಜಯ್ ದೇವಗನ್ ಅವರ ಸಿನಿಮಾ ಕೂಡ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಹೌದು, ಅಜಯ್ ದೇವಗನ್ಅಭಿನಯದ ‘ದೇ ದೇ ಪ್ಯಾರ್ ದೇ’ ಸಿನಿಮಾ ಇದೀಗ ಪೈರಸಿ ಬಲಿಯಾಗಿದೆ. ತಮಿಳು ರಾಕರ್ಸ್ ಈ ಸಿನಿಮಾವನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಿದೆ. ಈಗಾಗಲೇ ಬಹಳಷ್ಟು ಬಾರಿ ಈ ಬಗ್ಗೆ ದೂರು ದಾಖಲಾದರೂ ಕೂಡಈ ಬಗ್ಗೆ ಏನೂ ಮಾಡಲಾಗದೇ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಾಗೂ ಈ ಪೈರಸಿಯಿಂದ ಚೆನ್ನಾಗಿ ಚಿತ್ರಮಂದಿರಗಳಲ್ಲಿ ಓಡುತ್ತಿರುವ ಚಿತ್ರಗಳು ಕೂಡ ಗಳಿಕೆಯಲ್ಲೂ ಹಿಂದೆ ಉಳಿಯುವಂತಾಗುತ್ತದೆ.
No Comment! Be the first one.