ಇತ್ತೀಚಿಗಷ್ಟೇ ಬಾಲಿವುಡ್ ಫೇಮಸ್ ನಿರ್ಮಾಪಕ ಬೋನಿ ಕಪೂರ್ ತಮಿಳಿನ ತಲಾ ಅಜಿತ್ ಅವರ 60ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿ ಟ್ವಿಟರ್ ಮೂಲಕ ಅನೌನ್ಸ್ ಮಾಡಿದ್ದರು. ಸದ್ಯ ಈ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧಡಕ್ ಸಿನಿಮಾ ಮೂಲಕ ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟ ಶ್ರೀ ದೇವಿ ಪುತ್ರಿ ಜಾಹ್ನವಿ ಕಪೂರ್ ತನ್ನ ತಾಯಿಯ ಕನಸಿನಂತೆ ಅಜಿತ್ ಚಿತ್ರದ ಮೂಲಕವೇ ತಮಿಳು ಚಿತ್ರರಂಗಕ್ಕೆ ಎಂಟ್ರಿ ಪಡೆಯಲಿದ್ದಾರಂತೆ.

ಈ ಸಿನಿಮಾವನ್ನು ಎಚ್​. ವಿನೋದ್​​ ನಿರ್ದೇಶನ ಮಾಡಲಿದ್ದು, ಸದ್ಯಕ್ಕೆ ಸಿನಿಮಾಗೆ ತಲಾ 60 ಅಂತ ಹೆಸರಿಡಲಾಗಿದೆ. ಮೂಲಗಳ ಪ್ರಕಾರ ಆಗಸ್ಟ್​ ಕೊನೇ ವಾರದಲ್ಲಿ ಮುಹೂರ್ತ ನಡೆಯಲಿದ್ದು, ಸೆಪ್ಟೆಂಬರ್​ ಮೊದಲ ವಾರದಲ್ಲಿ ಶೂಟಿಂಗ್​ ಪ್ರಾರಂಭವಾಗಲಿದೆ. ತಲಾ 60 ಸಿನಿಮಾ ಥ್ರಿಲ್ಲಿಂಗ್​ ಹಾಗೂ ಮಾಸ್​ ಪ್ಯಾಕ್ಡ್​ ಆಗಿರಲಿದ್ದು, ಅಜಿತ್​ ಇಮೇಜ್​ಗೆ ಹೊಂದುವಂಥ ಕಥೆಯನ್ನು ನಿರ್ದೇಶಕರು ರೆಡಿ ಮಾಡಿದ್ದಾರೆ. ಇಂಟ್ರೆಸ್ಟಿಂಗ್​ ವಿಚಾರ ಅಂದರೆ 2012ರಲ್ಲಿ ರಿಲೀಸ್​ ಆದ ಇಂಗ್ಲೀಷ್​ ವಿಂಗ್ಲಿಷ್​ ಸಿನಿಮಾದಲ್ಲಿ ಶ್ರೀದೇವಿ ಮೇನ್​ ರೋಲ್​ ಮಾಡಿದ್ದರೆ ಅಜಿತ್​ ಗೆಸ್ಟ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು. ಅಜಿತ್​ ಅವರ ಅಪ್​ ಕಮಿಂಗ್​ ಸಿನಿಮಾ ನೆರ್​ಕೊಂಡ ಪಾರ್​​​ವೈ ಸಿನಿಮಾ ಕೂಡ ಹಿಂದಿಯ ಪಿಂಕ್​ ಸಿನಿಮಾದ ರಿಮೇಕ್ ಆಗಿದ್ದು, ಈ ಸಿನಿಮಾವನ್ನು ವಿನೋದ್​​ ನಿರ್ದೇಶಿಸಿದ್ದು, ಬೋನಿ ಕಪೂರ್​ ಬಂಡವಾಳ ಹೂಡಿದ್ದಾರೆ.

CG ARUN

ಅಧ್ಯಕ್ಷ ಇನ್ ಅಮೆರಿಕಾ ಟ್ರೇಲರ್ ಬಿಡುಗಡೆ!

Previous article

ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಭಾಸ್ಕರ್ ರಾವ್ ನೇಮಕ!

Next article

You may also like

Comments

Leave a reply

Your email address will not be published. Required fields are marked *