‘ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ತಮಿಳು ನಟ ಅಜಿತ್. ಯಾರೊಂದಿಗೂ ಬೆರೆಯದೆ, ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡು, ಸಿನಿಮಾ ಚಿತ್ರೀಕರಣ ಬಿಟ್ಟು ಬೇರೆ ಯಾವ ಸಭೆ ಸಮಾರಂಭಗಳಲ್ಲಿ ಭಾಗವಹಿಸದೆ, ಶೂಟಿಂಗ್ ಮುಗಿದ ಮೇಲೆ ಕಾರ್ ರೇಸು, ಅದೂ ಇದೂ ಅಂತಾ ತೊಡಗಿಸಿಕೊಳ್ಳುವ ನಟ ಈತ. ಆದರೆ ಬೇಡವೆಂದರೂ ಅಭಿಮಾನಿಗಳು ಅಜಿತ್ ಬೆನ್ನು ಬೀಳುತ್ತಾರೆ, ಸಿನಿಮಾಗಳನ್ನು ಗೆಲ್ಲಿಸುತ್ತಾರೆ. ಅದಕ್ಕೆ ಕಾರಣ ಆತನಲ್ಲಿರುವ ಅಸಾಧಾರಣ ಪ್ರತಿಭೆ!

ಈಗಿನ ವಿಚಾರವೇನೆಂದರೆ, ಅಜಿತ್ ನಟಿಸಿರುವ ‘ನೇರ್ ಕೊಂಡ ಪಾರ‍್ವೈ ಎನ್ನುವ ತಮಿಳು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಅದು ಅಮಿತಾಬ್ ಬಚ್ಚನ್ ನಟಿಸಿದ್ದ ಹಿಂದಿಯ ‘ಪಿಂಕ್ ಸಿನಿಮಾದ ರಿಮೇಕ್. ಈ ಚಿತ್ರದಲ್ಲಿ ಅಜಿತ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. ನಮ್ಮ ಕನ್ನಡದ ಹುಡುಗಿ ಶ್ರದ್ಧಾ ಶ್ರೀನಾಥ್ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಯುವ ನಿರ್ದೇಶಕ ವಿನೋದ್ ನಿರ್ದೇಶನದಲ್ಲಿ, ಬೋನಿ ಕಪೂರ್ ‘ನೇರ್ ಕೊಂಡ್ ಪಾರ‍್ವೈ ಸಿನಿಮಾವನ್ನು ನಿರ್ಮಿಸಿದ್ದರು.

ಈ ಚಿತ್ರ ಹಿಟ್ ಆಗುತ್ತಿದ್ದಂತೇ ‘ಎಕೆ 56 ಎನ್ನುವ ಮತ್ತೊಂದು ಚಿತ್ರವನ್ನು ಇದೇ ತಂಡ ಆರಂಭಿಸುತ್ತಿದೆ. ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭಿಸುತ್ತಿರುವ ‘ಎಕೆ ೫೬ ೨೦೨೦ರ ಬೇಸಗೆಗೆ ತೆರೆಗೆ ಬರಲಿದೆಯಂತೆ!

CG ARUN

ಅಧ್ಯಕ್ಷ ಇನ್ ಅಮೆರಿಕಾ ರಾಗಿಣಿ ದ್ವಿವೇದಿಯ 25ನೇ ಚಿತ್ರ!

Previous article

ಟ್ರೇಲರ್ ಮೂಲಕ ರೆಕ್ಕೆ ಬಿಚ್ಚಿ ಹಾರಿತು ಗರುಡ!

Next article

You may also like

Comments

Leave a reply

Your email address will not be published. Required fields are marked *