ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತಮ್ಮ ಫ್ಯಾಮಿಲಿಗೂ ಕೊಂಚ ಟೈಮ್ ಕೊಡುವ ಕಿಲಾಡಿ ಅಕ್ಷಯ್ ಕುಮಾರ್ ಲಂಡನ್ ನ ಬೀದಿಗಳಲ್ಲಿ ತಮ್ಮ ತಾಯಿಯನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ಸುತ್ತಾಡಿದ್ದಾರಂತೆ.
https://www.instagram.com/p/B1q6jTNnAO8/?utm_source=ig_web_copy_link
ಅಲ್ಲದೇ ಸ್ವತಃ ವಿಡಿಯೋವೊಂದನ್ನು ಹಂಚಿಕೊಂಡಿರುವ ಅಕ್ಕಿ ‘ಶೂಟಿಂಗನ್ನು ಸದ್ಯಕ್ಕೆ ನಿಲ್ಲಿಸಿ ಅಮ್ಮನ ಜೊತೆ ಲಂಡನ್ ನಲ್ಲಿದ್ದೇನೆ. ನೀವು ಜೀವನದಲ್ಲಿ ಎಷ್ಟು ಬ್ಯುಸಿ ಎನ್ನುವುದು ಮುಖ್ಯವಲ್ಲ. ಎಷ್ಟು ಬೆಳೆಯುತ್ತಿದ್ದೀರಿ ಎನ್ನುವುದೂ ಮುಖ್ಯವಲ್ಲ. ನಿಮ್ಮ ಪೋಷಕರಿಗೂ ವಯಸ್ಸಾಗುತ್ತಿದೆ ಎಂಬುದನ್ನು ಮರಿಯಬೇಡಿ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಅವರ ಜೊತೆ ಸಮಯ ಕಳೆಯಿರಿ’ ಎಂದು ಅಕ್ಷಯ್ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಕ್ಷಯ್ ಕುಮಾರ್ ಅವರ ಮಾತೃ ವಾತ್ಸಲ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.