ಸದ್ಯ ಬಾಲಿವುಡ್ನ ಜನಪ್ರಿಯ ಯುವತಾರೆಯರಾದ ಅಲಿಯಾ ಭಟ್ ಮತ್ತು ಸಿದ್ದಾರ್ಥ್ ಮಲ್ಹೋತ್ರ ಒಂದು ಕಾಲದಲ್ಲಿ ಪ್ರೇಮಿಗಳು. ಇಬ್ಬರೂ ಕರಣ್ ಜೋಹರ್ ನಿರ್ದೇಶನದ ’ಸ್ಟೂಡೆಂಟ್ ಆಫ್ ದಿ ಯಿಯರ್’ ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದವರೇ. ಚೊಚ್ಚಲ ಚಿತ್ರದ ನಂತರ ’ಕಪೂರ್ ಅಂಡ್ ಸನ್ಸ್’ ಹಿಂದಿ ಚಿತ್ರದಲ್ಲಿ ಜೋಡಿಯಾಗಿದ್ದರು. ಮೊದಲ ಚಿತ್ರದಲ್ಲೇ ಇಬ್ಬರ ಮಧ್ಯೆ ಪ್ರೀತಿ ಮೊಳೆತಿತ್ತು. ಡೇಟಿಂಗ್ನಲ್ಲಿದ್ದ ಇಬ್ಬರೂ ಕ್ರಮೇಣ ದೂರವಾದರು. ಪ್ರತ್ಯೇಕವಾಗಿದ್ದಕ್ಕೆ ಕಾರಣಗಳೂ ಸಿಗಲಿಲ್ಲ.
ಇದೀಗ ’ಕಾಫಿ ವಿಥ್ ಕರಣ್’ ಟೀವಿ ಶೋನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಳೆಯ ಪ್ರೀತಿಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲಿಯಾ ಜೊತೆಗಿನ ಬ್ರೇಕ್ಅಪ್ ನಂತರ ನೀವು ನಟಿ ಜಾಕ್ವಲಿನ್ ಫರ್ನಾಂಡಿಸ್ ಜೊತೆಗೆ ಓಡಾಡುತ್ತಿದ್ದೀರಿ ಎನ್ನುತ್ತಾ ಕರಣ್ ಪ್ರೀತಿಯ ವಿಷಯವನ್ನು ಕೆದಕಿದರು. ನೆನಪುಗಳಿಗೆ ಜಾರಿದ ಸಿದ್ದಾರ್ಥ್, ಹೌದು, ಬ್ರೇಕ್ಅಪ್ ನಂತರ ಮತ್ತೆ ಅಲಿಯಾಳನ್ನು ನಾನು ಭೇಟಿ ಮಾಡಿಲ್ಲ. ಹಾಗೆ ನೋಡಿದರೆ ಡೇಟಿಂಗ್ಗಿಂತ ಮುನ್ನವೇ ಅಲಿಯಾ ನನಗೆ ಪರಿಚಿತಳು. ಈಗ ಎಲ್ಲವೂ ಮುಗಿದು ಹೋದ ಕತೆ ಎಂದು ಮರುಗಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಕರಣ್ ಜೋಹರ್, ಅಲಿಯಾ ಜೊತೆಗಿನ ದಿನಗಳನ್ನು ಹೇಗೆ ನೆನಪು ಮಾಡಿಕೊಳ್ಳುತ್ತೀರಿ? ಎಂದು ಕೆದಕಿದರು. ಕ್ಯಾಮೆರಾ ಎದುರು ಮೊದಲ ಶಾಟ್ ಆಕೆಯೊಂದಿಗೆ ಎದುರಿಸಿದ್ದು. ಆ ’ರಾಧಾ’ ಸಾಂಗ್ ಈಗಲೂ ಕಿವಿಯಲ್ಲಿ ಗುಯ್ಗುಡುತ್ತಿದೆ. ಏನು ಮಾಡಲಾಗದು, ವ್ಯಕ್ತಿಗಳ ಬದುಕಿನಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ನೆನಪು ಮತ್ತು ಪ್ರೀತಿ ಇತಿಹಾಸ ಸೇರಿಹೋಗಿವೆ! ಎಂದಿದ್ದಾರೆ ಸಿದ್ದಾರ್ಥ್. ಅವರ ’ಜಬಾರಿಯಾ ಜೋಡಿ’ ಮತ್ತು ಮಾರ್ಜವಾನ್’ ಹಿಂದಿ ಚಿತ್ರಗಳು ತೆರೆಗೆ ಸಿದ್ಧವಾಗಿವೆ. ಇನ್ನು ಅಲಿಯಾ ಸದ್ಯ ರಣಬೀರ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ
#
No Comment! Be the first one.