ಚಿತ್ರರಂಗದಲ್ಲಿ 3 ದಶಕಗಳ ಅನುಭವ ಹೊಂದಿರುವ ನಿರ್ದೇಶಕ, ನಿರ್ಮಾಪಕ ಸೆಬಾಸ್ಟಿಯನ್ ಡೇವಿಡ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಮರಳಿ ಅದೇ ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಮಹದಾಸೆಯಿಂದ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಸಂಬಂಧಿ ಆ್ಯಕ್ಟಿವಿಟಿಗಳನ್ನೂ ಶುರು ಮಾಡಿದ್ದಾರೆ.

ಸೆಬಾಸ್ಟಿಯನ್ ಡೇವಿಡ್​ ಕನ್ನಡದಲ್ಲಿ ಕೆಲ ವರ್ಷಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಜ್ಯೋತಿ ಅಲಿಯಾಸ್ ಕೋತಿರಾಜ್​ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದಷ್ಟೇ ಅಲ್ಲ ಆರ್​ಟಿ ನಗರ ಮತ್ತು ಗಾಂಧಿನಗರದಲ್ಲಿ ಎರಡೆರಡು ಸ್ಟುಡಿಯೋ ನಡೆಸುತ್ತಿದ್ದರು. ಅದಾದ ಬಳಿಕ ಜಾಹೀರಾತು ನಿರ್ದೇಶನದಲ್ಲಿಯೇ ಹೆಚ್ಚು ಸಕ್ರೀಯರಾಗಿ, ಟಿವಿಯಲ್ಲಿ ನೋಡುವ ಬಹುತೇಕ ಎಲ್ಲ ಚಿನ್ನದ ಜಾಹೀರಾತುಗಳನ್ನು ಸೆಬಾಸ್ಟಿಯನ್ ಅವರೇ ನಿರ್ದೇಶನ ಮಾಡಿದ್ದಾರೆ.

ಆಲ್​ಫ್ಲಿಕ್ಸ್ ಎಂಟರ್​​ಟೈನ್​ಮೆಂಟ್​ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತೆರೆದಿದ್ದು, ಅದರ ಅಡಿಯಲ್ಲಿ ಓಟಿಟಿ (ಓವರ್​ ದಿ ಟಾಪ್​) ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕನ್ನಡದಲ್ಲಿ ಸದ್ಯ ಉತ್ಕೃಷ್ಟ ಗುಣಮಟ್ಟದ ಓಟಿಟಿ ವೇದಿಕೆ ಇಲ್ಲದ್ದನ್ನು ಮನಗಂಡು, ಆಲ್​ಫ್ಲಿಕ್ಸ್ (AllFlix) ಹೆಸರಿನಲ್ಲಿ ಓಟಿಟಿ ಸಿದ್ಧಪಡಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಈ ಓಟಿಟಿ ಇದೀಗ ಎಲ್ಲ ಹಂತದಿಂದಲೂ ರೆಡಿಯಾಗಿದ್ದು, ಇನ್ನೇನು ಶೀಘ್ರ ಅದರ ಲಾಂಚ್​ ಸಹ ಆಗಲಿದೆ. ಏಕಕಾಲದಲ್ಲಿ 50 ಸಾವಿರ ಜನ ಈ ಆ್ಯಪ್ ಬಳಕೆ ಮಾಡಿದರೂ, ಚೂರು ಹ್ಯಾಂಗ್​ ಆಗದ ರೀತಿಯಲ್ಲಿ ಅಪ್ಲಿಕೇಷನ್​ ಗುಣಮಟ್ಟದ್ದಾಗಿದೆ.

ಈಗಾಗಲೇ ಈ ಓಟಿಟಿ ಸಲುವಾಗಿ ಗ್ಲಾಮರ್​ ವೆಬ್​ಸಿರೀಸ್​ ನಿರ್ಮಾಣ ಕೆಲಸವೂ ಶುರುವಾಗಿದ್ದು, ಶೀಘ್ರದಲ್ಲಿ ಶೂಟಿಂಗ್ ಸಹ ಶುರುವಾಗಲಿದೆ. ಕುರಿಬಾಂಡ್ ಸುನಿಲ್ ಆ ವೆಬ್​ಸಿರೀಸ್​ನಲ್ಲಿ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಇದರ ನಿರ್ಮಾಣದ ಜವಾಬ್ದಾರಿ ಸೆಬಾಸ್ಟಿಯನ್ ಅವರದ್ದೇ. ಇದಷ್ಟೇ ಅಲ್ಲದೇ ಬೇರೆ ಬೇರೆ ನಿರ್ಮಾಪಕರು ವೆಬ್​ಸಿರೀಸ್ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಒಳ್ಳೆಯ ವಿಚಾರ.

ಸಿನಿಮಾಕ್ಕೆ ಸಂಬಂಧಿಸಿದ ಆ್ಯಕ್ಟಿವಿಟಿಗಳಾದ ಡಬ್ಬಿಂಗ್, ಎಡಿಟಿಂಗ್, ಡಿಟಿಎಸ್​, ಡಿಐ, ಸಿಜಿ ಕೆಲಸ ಬಹುತೇಖ ಎಲ್ಲ ಕೆಲಸಗಳು ಒಂದೇ ಸೂರಿನಡಿ ಸೆಬಾಸ್ಟಿಯನ್ ಡೇವಿಡ್​ ಮಾಡಿಕೊಡುತ್ತಿದ್ದಾರೆ. ಗ್ರೀನ್​ ಮ್ಯಾಟ್​  ಮತ್ತು ವೈಟ್ ಮ್ಯಾಟ್​ ಸ್ಟುಡಿಯೋ ಸೇವೆಯನ್ನೂ ಅವರು ಒದಗಿಸುತ್ತಿದ್ದಾರೆ. ಈಗಾಗಲೇ ನಗರದ ಹೊರಭಾಗದಲ್ಲಿ ಈ ಈ ಸೇವೆ ಇದೆಯಾದರೂ, ಸಿನಿಮಂದಿಗೆ ಅದು ಹೊರೆಯೇ. ಆದರೆ, ಸೆಬಾಸ್ಟಿಯನ್ ಅವರು ನಗರದ ಹೃದಯಭಾಗವಾದ ಬಸವೇಶ್ವರ ನಗರದ ಶಂಕರಮಠದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಅತ್ಯುತ್ತಮ ಔಟ್​ಲುಕ್​ ಮತ್ತು ಕಂಫರ್ಟ್ ಫೀಲ್​ ನೀಡುವ ಸ್ಟುಡಿಯೀ ಇದಾಗಿದ್ದು, ಪಾರ್ಕಿಂಗ್​ ಸೌಲಭ್ಯವೂ ಸಾಕಷ್ಟಿದೆ. ಹವಾನಿಯಂತ್ರಿತ ಸ್ಟುಡಿಯೋ ಎಲ್ಲರಿಗೂ ಇಷ್ಟವಾಗಲಿದೆ.

ಇದರ ಜತೆಗೆ ಲೈವ್​ ಸ್ಟ್ರೀಮಿಂಗ್ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದು, ಕಾರ್ಯಕ್ರಮದ ಎಚ್​ಡಿ ಕ್ವಾಲಿಟಿ ವಿಡಿಯೋವನ್ನು ಲೈವ್​ ಸ್ಟ್ರೀಮಿಂಗ್​ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಂಡಸ್ಟ್ರೀಗೆ ಒಂದೊಳ್ಳೆ ಸರ್ವಿಸ್ ಕೊಡಬೇಕೆಂಬುದು ನನ್ನ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆ ಕಡೆಯಿಂದ ನೀಡಲು ಸಿದ್ಧವಿದ್ದೇವೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಿರುಗಿಬಿದ್ದಳು ದೀಪಿಕಾ!

Previous article

100 CRORES ಸಿನಿಮಾ ಪೋಸ್ಟರ್ ಲಾಂಚ್​ ಮಾಡಿದ ಸಿಂಪಲ್ ಸುನಿ

Next article

You may also like

Comments

Leave a reply

Your email address will not be published. Required fields are marked *