ಸಣ್ಣ ಸಣ್ಣ ವಿಚಾರದಿಂದಲೂ ಸುದ್ದಿಯಾಗುವ ನಟಿ ಅಮಲಾ ಪೌಲ್. ಪೋಟೋ ಶೂಟು, ಮದುವೆ, ಡೇಟಿಂಗು, ಡಿವೋರ್ಸು, ಆಸ್ತಿ ಇತ್ಯಾದಿ ವಿಚಾರಗಳೇ ಆಕೆಯ ಪಬ್ಲಿಸಿಟಿಗೆ ಮೇನ್ ರೀಜನ್ನು. ಅಮಲಾ ಪೌಲ್ ನಟಿಸುತ್ತಿರುವ ಅಡೈ ಸಿನಿಮಾ ಸೆಟ್ಟೇರಿದಾಗಿನಿಂದ ಬಹಳಷ್ಟು ವಿಚಾರಕ್ಕೆ ನ್ಯೂಸಾಗುತ್ತಲೇ ಇತ್ತು.
ಚಿತ್ರದ ಫಸ್ಟ್ ಲುಕ್ ನಲ್ಲೇ ಅಮಲಾ ಕೈಯಲ್ಲಿ ಕತ್ತಿ ಹಿಡಿದು, ಜೋರಾಗಿ ಅಳುತ್ತಾ ಅರೆ ನಗ್ನವಾಗಿ ಕಾಣಿಸಿಕೊಂಡಿದ್ದು ಬಾರಿ ಸುದ್ದಿಯಾಗಿತ್ತು. ಪೋಸ್ಟರ್ ನೋಡಿದ್ದ ಟ್ರೋಲಿಗರು ಅಮಲಾ ಅವರನ್ನು ಮುಂದಿನ ಸನ್ನಿಲಿಯೋನ್ ಎಂತಲೂ ಕಾಲೆಳೆದಿದ್ದರು. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಅಡೈ ಸೆನ್ಸಾರ್ ಬೋರ್ಡ್ ನಿಂದ ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಕೌಟುಂಬಿಕ ಪ್ರೇಕ್ಷಕರಿಂದ ಅಂತರವನ್ನು ಕಾಯ್ದುಕೊಂಡು ಈ ಸಿನಿಮಾ ಪಡ್ಡೆ ಹೈಕಳ ಮದ ಏರಿಸುವಲ್ಲಿ ಎಷ್ಟರಮಟ್ಟಿಗೆ ವರ್ಕ್ ಔಟ್ ಮಾಡಿದೆ ಎಂಬುದನ್ನು ಕಾದು ನೋಡಬೇಕಿದೆ.
No Comment! Be the first one.