ತಮಿಳು ಆಡೈ ಮೂಲಕ ಪದೇ ಪದೇ ನ್ಯೂಸಾಗುತ್ತಿರುವ ಅಮಲಾ ಪೌಲ್ ಸೆಕೆಂಡ್ ಮ್ಯಾರೇಜ್ ಆಗಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ತುಟಿ ಬಿಚ್ಚದ ಅಮಲಾ ತನ್ನ ಮಾಜಿ ಪತಿ ಎ.ಎಲ್. ವಿಜಯ್ ಮರು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತನಗೂ ಒಬ್ಬ ಬಾಯ್ ಫ್ರೆಂಡ್ ಇರುವುದಾಗಿ ಸ್ಟೇಟ್ ಮೆಂಟ್ ಕೊಟ್ಟು ಎಲ್ಲರ ಕಣ್ಣರಳುವಂತೆ ಮಾಡಿದ್ದಾರೆ.

ವಿಜಯ್ ವಿಚ್ಚೇದನನ ನಂತರ ಬಹಳ ಕಾಲ ಒಂಟಿಯಾಗಿಯೇ ಲೈಫ್ ಲೀಡ್ ಮಾಡಿದ್ದ ಅಮಲಾ ಪೌಲ್ ಸದ್ಯ ತನಗೊಬ್ಬ ಗೆಳೆಯನಿದ್ದು, ಅವನ ಜತೆ ಪ್ರೀತಿಯಲ್ಲಿರುವ ವಿಚಾರವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಆದರೆ ಆ ವ್ಯಕ್ತಿ ಸಿನಿಮಾದವರಲ್ಲ. ಸದ್ಯಕ್ಕೆ ಅವರು ಯಾರೆಂಬುದರ ಅಗತ್ಯವೂ ಇಲ್ಲ ನಾನೇ ಸಮಯಬಂದಾಗ ಅವರನ್ನು ಮುಖ್ಯವಾಹಿನಿಗೆ ಕರೆತರುತ್ತೇನೆ. ಈಗ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಕೆರಿಯರ್ ಬಗ್ಗೆ ಮಾತ್ರ ಫೋಕಸ್ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

 

CG ARUN

ಕ್ರೇಜಿಸ್ಟಾರ್ ಅಭಿನಯದ ದಶರಥನ ಟ್ರೇಲರ್ ಬಿಡುಗಡೆ!

Previous article

ಧಮ್ ಹೊಡೆದ ಟ್ರೋಲಿಗೆ ರಾಕುಲ್ ತಿರುಗೇಟು!

Next article

You may also like

Comments

Leave a reply

Your email address will not be published. Required fields are marked *