ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸೌತ್ ಇಂಡಿಯಾದ ಮಾದಕ ನಟಿ ಅಮಲಾ ಪೌಲ್ ಇದೀಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ನಾನಾ ವಿಚಾರಕ್ಕೆ ಟ್ರೋಲ್ ಆದರೆ ಅಮಲಾ ತಾನು ಧರಿಸಿದ್ದ ಬಟ್ಟೆಯಿಂದಲೇ ಟ್ರೋಲ್ ಆಗಿರುವುದು ಶಾಕಿಂಗ್ ವಿಚಾರ.
ವಾರದ ಹಿಂದೆ ಹಳದಿ ಬಣ್ಣದ ಟಾಪ್ ಮತ್ತು ಗ್ರೇ ಬಣ್ಣದ ಸ್ಕರ್ಟ್ ಧರಿಸಿರುವ ತನ್ನ ಫೋಟೋವೊಂದನ್ನು ಅಮಲಾ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
https://www.instagram.com/p/BxAKx9Cg18m/?utm_source=ig_web_copy_link
ಜೊತೆಗೆ ‘ ನಾನು ಏನು ಬೇಕಾದರೂ ಆಗಬಲ್ಲೆ. ಇಂದು ನಾನು ಹ್ಯಾಪಿ ಮ್ಯಾಂಗೊ ಆಗಿದ್ದೇನೆ‘ ಎಂದು ಬರೆದುಕೊಂಡಿದ್ದರು. ಈ ರೀತಿ ಬರೆಯುವ ಮೂಲಕ ಹಳದಿ ಬಣ್ಣದ ಮೇಲಿರುವ ತಮ್ಮ ಒಲವನ್ನು ಅಮಲಾ ತೋರಿಸಿಕೊಂಡಿದ್ದರು.ಇದೀಗ ಆ ಫೋಟೋಕ್ಕೆ ಸಾವಿರಾರು ಕಮೆಂಟ್ ಗಳು ಬರುತ್ತಿವೆ. ಅಮಲಾ ಪೌಲ್ ಈ ಫೋಟೊ ಹಾಕಿ ಒಂದು ವಾರ ಆಗಿದ್ದರೂ ಕಮೆಂಟ್ ಗಳ ಸುರಿಮಳೆ ಕಡಿಮೆಯಾಗಲಿಲ್ಲ. ಕೆಲವರು ಫೋಟೋ ಚೆನ್ನಾಗಿದೆ ಎಂದು ಕಮೆಂಟ್ ಹಾಕಿದ್ದರೆ ಇನ್ನು ಕೆಲವರು ಮಾವಿನಹಣ್ಣುಗಳು ಚೆನ್ನಾಗಿವೆ, ಹಾಟ್ ಮ್ಯಾಂಗೊ, ಜ್ಯೂಸಿ ಮುಂತಾದ ಕಮೆಂಟ್ ಗಳನ್ನು ಹಾಕಿದ್ದಾರೆ.
No Comment! Be the first one.