ಲೈಫ್ ಇಸ್ ಬ್ಯೂಟಿಫುಲ್ ಚಿತ್ರಕ್ಕಾಗಿ ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಇದೇ ಮೊದಲ ಬಾರಿಗೆ ಗೀತೆಯೊಂದನ್ನು ಹಾಡಿದ್ದಾರೆ. ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು, ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದು ವಿಶೇಷ. ಈ ಕುರಿತು ಅವರು ಹೇಳುವುದು ಹೀಗೆ, “ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ್ಗೆ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾ ದಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜಾಕ್ಸನ್ ನನ್ನ ಅಚ್ಚುಮೆಚ್ಚಿನ ಕಲಾವಿದ. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಒಲವೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಸಿಕ್ಕಿದೆ” ಎನ್ನುತ್ತಾರೆ.
ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿ, ಅದನ್ನು ಕೇಳಿಸಲು ಚಿತ್ರದ ನಿರ್ದೇಶಕರಿಗೆ ಕಳುಹಿಸಿದ್ದಾರೆ. ಆ ಮ್ಯೂಸಿಕ್ ಟ್ರ್ಯಾಕ್ ಕೇಳಿಸಿಕೊಂಡ ಪೃಥ್ವಿ ಅಂಬರ್, ಸ್ವತಃ ತಾವೇ ಸಾಹಿತ್ಯ ಸಂಯೋಜಿಸಿ, ಹಾಡಿದ್ದಾರೆ. ಇವರ ಹಾಡು ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದೆ. ಚೆನ್ನಾಗಿಯೇ ಹಾಡುತ್ತಾರಲ್ಲ ಅನ್ನುವ ಕಾರಣಕ್ಕಾಗಿ ಸಂಗೀತ ನಿರ್ದೇಶಕರು, ಅವಕಾಶ ನೀಡಿದ್ದಾರೆ. ಇದೊಂದು ಬಯಸದೇ ಬಂದ ಭಾಗ್ಯ ಎನ್ನುವುದು ಪೃಥ್ವಿ ಮಾತು
ನೊಬಿನ್ ಪೌಲ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದಾರೆ. ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನದ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು. ಪ್ರೈಡ್ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷಿನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.
No Comment! Be the first one.