ರೆಬಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮ ದಿನದ ಪ್ರಯುಕ್ತ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಪುಷ್ಬ ನಮನಸಲ್ಲಿಸುತ್ತಿದ್ದರೆ, ವಿಜಯ ಕರ್ನಾಟಕದ ಸಿನಿಮಾ ಪತ್ರಕರ್ತ ಡಾ. ಶರಣ್ ಹುಲ್ಲೂರು ಅಕ್ಷರ ನಮನವನ್ನು ಸಲ್ಲಿಸಲಿದ್ದಾರೆ. ಹೌದು ಅಂಬರೀಶ್ ಅವರ ವರ್ಣ ರಂಜಿತ ವ್ಯಕ್ತಿತ್ವವನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಲಾಗಿದ್ದು, ಅಂಬಿ ಬದುಕಿನ ಕುರಿತಾಗಿ ಅಂಬರೀಶ್ ವ್ಯಕ್ತಿ, ವ್ಯಕ್ತಿತ್ವ, ವರ್ಣರಂಜಿತ ಬದುಕು ಎಂಬ ಪುಸ್ತಕ ಬಿಡುಗಡೆಯಾಗುತ್ತಿದೆ.
ಶರಣು ಹುಲ್ಲೂರು ಬರೆದ ಅಂಬರೀಶ್ ಅವರ ಪುಸ್ತಕ ಇಂದು ಬಿಡುಗಡೆ
👍😊👍😊 pic.twitter.com/lQoy3EYhG3— Upendra (@nimmaupendra) May 29, 2019
ಸವನ್ನಾ ಪ್ರಕಾಶನ ಈ ಪುಸ್ತಕವನ್ನು ಹೊರತರುತ್ತಿದೆ. ಈ ಪುಸ್ತಕವು ಕಳೆದ ಡಿಸೆಂಬರ್ ನಲ್ಲಿಯೇ ತಯಾರಾಗಿದ್ದರೂ ಸಹ ಬಿಡುಗಡೆಗೆ ಕಾಲ ಕೂಡಿ ಬಂದಿರಲಿಲ್ಲವಂತೆ. ಇಂದು ಅಂಬರೀಶ್ ಅವರ ಹುಟ್ಟುಹಬ್ಬದ ದಿನವೇ ಮಂಡ್ಯದಲ್ಲಿ ನಡೆಯಲಿರುವ ಅಂಬರೀಶ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಆಗುತ್ತಿದೆ. ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್, ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಭಿಮಾನಿಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
No Comment! Be the first one.