ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.
ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳುತ್ತಲೇ ಇಂಥಾ ಚೆಂದದ ಚಿತ್ರವೊಂದನ್ನು ನಿರ್ಮಾಣ ಮಾಡಿರುವ ಜಾಕ್ ಮಂಜು ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಇತ್ತೀಚೆಗೆ ಈ ಚಿತ್ರವನ್ನು ನೋಡಿ ಪ್ರೀತಿಯ ಮಾತುಗಳನ್ನಾಡಿದ್ದರು. ಈಗಾಗಲೇ ಹಲವು ತಾರೆಯರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ನೋಡುವ ಹಾದಿಯಲ್ಲಿದ್ದಾರೆ.
#
No Comment! Be the first one.