ಸುದೀಪ್ ನಟಿಸಿದ್ದ ಹೆಬ್ಬುಲಿಯಂಥಾ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಸ್ ಆರ್ ವಿ ಪ್ರೊಡಕ್ಷನ್ಸ್ ಮಾಲೀಕ ರಘುನಾಥ್ ಅಂಬರೀಶ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕನ್ನಡಿಗರ ಪ್ರೀತಿಯ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿರುವುದು ವಿಷಾಧದ ಸಂಗತಿ. ಅವರು ನಮ್ಮ ಚಿತ್ರರಂಗದ ಯಜಮಾನನಂತಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಮತ್ತು ನಾವೆಲ್ಲರೂ ತಬ್ಬಲಿಗಳಂತಾಗಿದ್ದೆವೆ. ಅವರ ಸ್ಫೂರ್ತಿಯಿಂದಲೇ ನಾನು ಚಿತ್ರರಂಗಕ್ಕೆ ನಿರ್ಮಾಪಕನಾಗಿ ಬಂದು ಹೆಬ್ಬುಲಿಯಂಥಾ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ.
ಇಂದು ಆರಾಧ್ಯ ದೈವದಂತಾ ನಾಯಕನನ್ನು ಕಲೆದುಕೊಂಡು ದುಃಖಿತನಾಗಿದ್ದೇನೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅನ್ನುವ ಮೂಲಕ ರಘುನಾಥ್ ತಾವು ಬಹುವಾಗಿ ಆರಾಧಿಸುತ್ತಿದ್ದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
#