ಲೇಖಕ ಅಮೀಶ್ ತ್ರಿಪಾಟಿ ಬರೆದ ಶಿವ ಸರಣಿಯ ಪುಸ್ತಕಗಳನ್ನು  ಓದುಗರು ಮರೆಯುವುದಕ್ಕೇ ಸಾಧ್ಯವಿಲ್ಲ. ಶಿವ, ನಂದಿ, ಸತಿ, ವೀರಭದ್ರ, ದಕ್ಷ… ಇಂತಹ ಪುರಾಣಗಳಲ್ಲಿ ಬರುವ ಪಾತ್ರಗಳ ಹೆಸರು ಬಳಸಿ ಹೊಸ ರೀತಿಯಲ್ಲಿ ಕಥೆ ಹೆಣೆದ ಈ ಸರಣಿ ಬಹಳ ಜನಪ್ರಿಯಗೊಂಡಿತ್ತು. ಈ ಸರಣಿಯ ಪುಸ್ತಕಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದ ಕೂಡ ಆಗಿವೆ.

ಸದ್ಯ ಈ ಸರಣಿಯು ವೆಬ್ ಸಿರೀಸ್ ರೂಪದಲ್ಲಿ ಕೂಡ ಬರಲಿದೆ. ಓದುವ ಹವ್ಯಾಸ ಇಲ್ಲದವರಿಗೆ, ನೋಡುವುದನ್ನೇ ಪ್ರೀತಿಸುವವರಿಗೆ ಶಿವ ಸರಣಿಯ ಕಥೆ ತಿಳಿದುಕೊಳ್ಳುವ ಅವಕಾಶ ಲಭ್ಯವಾಗಲಿದೆ. ಅಂದಹಾಗೆ, ಈ ಸರಣಿಯ ಮೊದಲ ಪುಸ್ತಕ ‘ಇಮ್ಮಾರ್ಟಲ್ಸ್‌ ಆಫ್‌ ಮೆಲೂಹ’ ಪುಸ್ತಕದ ಸಿನಿಮಾ ಹಕ್ಕುಗಳನ್ನು ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ 2014ರಲ್ಲೇ ಪಡೆದಿದ್ದರು.  ಆದರೆ, ಅದನ್ನು ಸಿನಿಮಾ ಮಾಡುವ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ. ‘ಹಕ್ಕುಗಳು ಪುನಃ ಕರಣ್ ಅವರಿಂದ ನಮಗೆ ವಾಪಸ್ ಬಂದಿವೆ. ಒಬ್ಬ ನಿರ್ಮಾಪಕರ ಜೊತೆ ಹೊಸದಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಶಿವ ಸರಣಿಯನ್ನು ಆಧರಿಸಿ ವೆಬ್ ಸಿರೀಸ್‌ ರೂಪಿಸುವ ಕೆಲಸ ನಡೆದಿದೆ’ ಎಂದು ಅಮೀಶ್ ತಿಳಿಸಿದ್ದಾರೆ. ಸದ್ಯದಲ್ಲೇ ವೆಬ್ ಸಿರೀಸ್ ಕುರಿತಾದ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

CG ARUN

ನಾನು ಮತ್ತು ಗುಂಡ ಎರಡನೇ ಟೀಸರ್ ಬಿಡುಗಡೆ!

Previous article

ಅರ್ಜುನ್ ಗೌಡ ಟೀಸರ್ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *