ಬಿ ಟೌನಿನ ಮಿಸ್ಟರ್ ಫರ್ಫೆಕ್ಟ್ ಎಂದೇ ಹೆಸರುವಾಸಿಯಾದ ನಟ ಅಮಿರ್ ಖಾನ್. ಅವರು ಯಾವುದೇ ಸಿನಿಮಾವನ್ನು ಒಪ್ಪಿಕೊಂಡರೂ ಕಥೆಗೆ ತಕ್ಕಂತೆ ತನ್ನನ್ನು ತನ್ನ ಸ್ವಭಾವ, ದೇಹವನ್ನು ಹುರಿಗೊಳಿಸಿ ಚಿತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಈ ಹಿಂದೆ ಕ್ರೀಡಾ ನಾಟಕಾಧಾರಿತ ಚಲನಚಿತ್ರ ದಂಗಲ್ ಚಿತ್ರಕ್ಕಾಗಿ ತಂದೆಯ ಪಾತ್ರ ಮಾಡಲು 96 ಕೆಜಿಯವರೆಗೂ ತೂಕವನ್ನು ಹೆಚ್ಚಿಸಿಕೊಂಡು ನಂತರ 68 ಕೆಜಿಗೆ ತನ್ನ ತೂಕವನ್ನು ಕಡಿಮೆ ಅವಧಿಯಲ್ಲಿ ಇಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಬಾಡಿ ಟ್ರಾನ್ಸ್ ಫಾರ್ಮೇಶನ್ ಗೆ ಅಮಿರ್ ಖಾನ್ ಮುಂದಾಗಿದ್ದಾರಂತೆ.
ಯೆಸ್.. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಯುವಕನ ಪಾತ್ರದಲ್ಲಿ ನಟಿಸುವುದಕ್ಕಾಗಿ ಅಮಿರ್ ಖಾನ್ ಬರೋಬ್ಬರಿ 20 ಕೆ.ಜಿ. ದೇಹ ತೂಕ ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ಇದು ಟಾಮ್ ಹ್ಯಾಂಕ್ಸ್ ನಟಿಸಿದ್ದ ಫಾರೆಸ್ಟ್ ಗಂಪ್ ನ ರಿಮೇಕ್ ಸಿನಿಮಾವಾಗಿದೆ. ಥಗ್ಸ್ ಆಫ್ ಫಯರ್ ಚಿತ್ರದ ಸೋಲಿನ ನಂತರ ಲಾಲ್ ಸಿಂಗ್ ಚಡ್ಡಾ ಚಿತ್ರದ ಸಿದ್ಧತೆಯಲ್ಲಿ ಅಮಿರ್ ಖಾನ್ ಇದ್ದಾರೆ.