ಅಮಿಶಾ ಪಟೇಲ್ ನಟನೆಯ ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಲೇ ಪಡ್ಡೆ ಹೈಕಳಿಗೆ ಮೈ ಬಿಸಿ ಮಾಡುತ್ತಿರುತ್ತಾರೆ. ಇತ್ತೀಚಿಗೆ ಅಮಿಶಾ ಅಂತಹುದೇ ಅರೆನಗ್ನ ಪೋಟೋವೊಂದನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.
https://twitter.com/ameesha_patel/status/1140586506404319233
ಈ ಪೋಟೋಗೆ ಸಾಕಷ್ಟು ನೆಗೇಟಿವ್ ಪಾಸೀಟಿವ್ ಕಮೆಂಟುಗಳು ಹರಿದುಬಂದಿದೆ. ಕೈ ತೆಗೆಯಿರಿ ಆಂಟಿ, ಲವ್ ಯೂ ಮೇಡಂ ಇತ್ಯಾದಿ ಇತ್ಯಾದಿಯಾಗಿ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ತುಂಬಾ ಕೆಟ್ಟ ಚಿತ್ರ, ನೋಡಲು ಅಜ್ಜಿ ತರಹ ಇದ್ದಾರೆ, ಇದರಲ್ಲೇನಿದೆ ವಿಶೇಷ ಎಂಬ ಕಾಮೆಂಟ್ಗಳನ್ನೂ ಮಾಡಿದ್ದಾರೆ. ಈ ಅರೆನಗ್ನ ಪೋಟೋ ಜತೆಯಾಗಿ ಅಮಿಶಾ ಎರಡು ಹಾರ್ಟ್ ಸಿಂಬಲ್ ವಿತ್ ಕಾಮನಬಿಲ್ಲಿನ ಇಮೋಜಿಗಳನ್ನು ಹಾಕಿದ್ದಾರೆ. ಆರಂಭದಲ್ಲಿ ಅವಕಾಶಗಳ ಸುರಿಮಳೆಯನ್ನೇ ಪಡೆದ ಅಮಿಶಾ ಪಟೇಲ್ ಬರು ಬರುತ್ತಾ ಮೂಲೆಯಲ್ಲಿಟ್ಟಿರುವ ಒಳಕಲ್ಲಿನಂತಾಗಿ ಹೋದರು. ಅಷ್ಟೇನು ಅವಕಾಶಗಳು ಸಿಗದೇ ಬರುವ ಅವಕಾಶವನ್ನೇ ಬಾಚಿಕೊಳ್ಳುವಂತಾಯಿತು. ಹಾಗಿದ್ದರೂ ಅಭಿನಯಿಸಿದ ಬಹುತೇಕ ಸಿನಿಮಾಗಳು ಅಮಿಶಾಗೆ ಯಾವುದೇ ಸ್ಥಾನಮಾನವನ್ನು ತರಲಿಲ್ಲ. ಪೋಟೋ ಹಂಚಿಕೊಳ್ಳುವ ಮೂಲಕವಾದರೂ ಮತ್ತಷ್ಟು ಅವಕಾಶ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ನಲ್ಲಿರುವ ಅಮಿಶಾಗೆ ಅದೂ ಸಹ ಕೈಗೂಡಿದಂತೆ ಕಾಣುತ್ತಿಲ್ಲ. ಸದ್ಯಕ್ಕೆ ದೇಶಿ ಮ್ಯಾಜಿಕ್ ಎಂಬ ಬಾಲಿವುಡ್ ಸಿನಿಮಾದಲ್ಲಿ ಅಮಿಶಾ ಅಭಿನಯಿಸುತ್ತಿದ್ದಾರೆ.
Comments