ಅಮಿತಾಬ್ ಇತ್ತೀಚೆಗೆ ಟ್ವೀಟ್ ಒಂದನ್ನು ಮಾಡಿದ್ದು ಸದ್ಯ ಈ ಟ್ವಿಟ್ ಚರ್ಚೆಗೆ ಗ್ರಾಸವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ಸೆಲೆಬ್ರೆಟಿಗಳ ಪೈಕಿ ಅಮಿತಾಬ್ ಬಚ್ಚನ್ ಮೊದಲಿಗರು. ಅವರು ಟ್ವಿಟರ್, ಇನ್ ಸ್ಟಾದಲ್ಲಿ ಬ್ಯುಸಿ ಇರುವ ಜತೆಗೆ ಅಭಿಮಾನಿಗಳಿಗೆ ದರ್ಶನ್ ನೀಡ್ತಾನೆ ಇರ್ತಾರೆ. ಹೀಗೆ ಟ್ವಿಟ್ಟರ್ ಮೂಲಕ ಸದಾ ಅಭಿಮಾನಿಗಳ ಜೊತೆ ಇರುವ ಈ ನಟ ಇದೀಗ ಮಾಡಿರುವ ಟ್ವಿಟ್ ಒಂದು ಬಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ವಿಶ್ವದ ದೊಡ್ಡ ದೊಡ್ಡ ಕಂಪನಿಗಳಾದ ಅಮೇಜಾನ್, ಆಪಲ್, ಗೂಗಲ್, ಮೈಕ್ರೋಸಾಫ್ಟ್, ಇಂಟೆಲ್, ಫೇಸ್ಬುಕ್, ನೆಟ್ಫ್ಲಿಕ್ಸ್ ಪ್ರತೀ ಗಂಟೆಗೆ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿವೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹಾಗಾಗಿ ಈ ನಿಟ್ಟಿನಲ್ಲಿ ಬಿಗ್ ಬಿ ಇವುಗಳನ್ನೆಲ್ಲಾ ಕೋಟ್ ಮಾಡಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವಿಟ್ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂಗಾಗಿದೆ.
ಈ ಎಲ್ಲಾ ಕಂಪನಿಗಳನ್ನು ನೋಡಿದ್ರೆ, ನಾವು ಸರಿಯಾದ ಉದ್ಯೋಗದಲ್ಲಿ ಇಲ್ಲ, ತಪ್ಪು ಆಯ್ಕೆ ಮಾಡಿಕೊಂಡಿದ್ದೇವೆ ಅನಿಸುತ್ತಿದೆ ಅಂತ ಅಮಿತಾಬ್ ಹೇಳಿದ್ದಾರೆ. ರಿಯಲಿ..? ವಿ ಆರ್ ಇನ್ ದ ರಾಂಗ್ ಜಾಬ್..! ಅಂತ ಅಚ್ಚರಿ ವ್ಯಕ್ತಪಡಿಸಿ ನಗುವ ಇಮೋಜಿಗಳನ್ನು ಹಾಕಿದ್ದಾರೆ. ಇದಕ್ಕೆ ಸಾಕಷ್ಟು ರಿಪ್ಲೇ ಗಳು ಬಂದಿವೆ.
No Comment! Be the first one.