ಕೌನ್ ಬನೇಗಾ ಕರೋಡ್ ಪತಿ ಸೀಜನ್ 11ರ ಆವೃತ್ತಿ ಸದ್ಯದಲ್ಲಿಯೇ ಶುರುವಾಗಲಿದೆ. ಅಮಿತಾಬ್ ಬಚ್ಚನ್ ಅವರ ಪ್ರೋಮೋ ಶೂಟ್ ಈಗಾಗಲೇ ಮುಗಿದಿದ್ದು ಈ ಸರಣಿಯನ್ನು ಅಮಿತಾಬ್ ಬಚ್ಚನ್ ಅವರೇ ನಡೆಸಿಕೊಡಲಿದ್ಧಾರೆ. ಅಮಿತಾಬ್ ಬಚ್ಚನ್ ಅವರ ಅಪ್ ಕಮಿಂಗ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಲಖನೌನಲ್ಲಿ ಬೀಡುಬಿಟ್ಟಿದ್ದಾರೆ.

ಕರೋಡ್ ಪತಿ ತಂಡ ಅಲ್ಲಿಗೆ ತೆರಳಿ ಪ್ರೋಮೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದರ ಫಸ್ಟ್ ಲುಕ್ ಅನ್ನು ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ “ಒಂದು ಕೆಲಸ ಮುಗಿದಾಗ ಮತ್ತೊಂದು ಕೆಲಸ ಶುರು ಮಾಡಲೇಬೇಕು. ಕೆಬಿಸಿ ಪ್ರೋಮೋ.. ಎಲ್ಲ ಅಂದುಕೊಂಡಂತಾದರೆ ಆಗಸ್ಟ್‌ ಮೊದಲ ವಾರದಲ್ಲಿ ಶೋ ಆರಂಭ” ಎಂದು ಬರೆದುಕೊಂಡಿದ್ದಾರೆ.

CG ARUN

ಪವರ್ ಸ್ಟಾರ್ ಹುಚ್ಚನ ಪಾತ್ರ ಮಾಡ್ಬೇಕಂತೆ!

Previous article

ಕೂಲಿ ನಂ 1 ರಿಮೇಕಿಗೆ ಮೂಲ ಹಾಡಿನ ಬಳಕೆ!

Next article

You may also like

Comments

Leave a reply

Your email address will not be published. Required fields are marked *