ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್ನಿನ ‘ದಿ ವಿಲನ್’ ಸಿನಿಮಾದಲ್ಲಿ ಅಭಿನಯಿಸಿದ್ದ ಆ್ಯಮಿ ಜಾಕ್ಸನ್ ಗರ್ಭಿಣಿಯಾಗಿದ್ದಾರೆ. ಅದಾವ ವಿಚಾರ ಅಂತಾ ಮೂಗು ಮುರೀಬೇಡಿ. ಆಕೆ ಮದುವೆಗೆ ಮೊದಲೇ ಪ್ರೆಗ್ನೆಂಟ್ ಆಗಿದ್ದಾರೆ. ಹೌದು.. “ತಾಯಂದಿರ ದಿನವೇ ಗರ್ಭಿಣಿಯಾಗಿರುವುದು ನನಗೆ ತಿಳಿಯಿತು. ಶೀಘ್ರವೇ ನಮ್ಮ ಮಗುವಿನೊಮದಿಗೆ ನಿಮ್ಮ ಎದುರು ಕಾಣಿಸಿಕೊಳ್ಳುತ್ತೇವೆ” ಎಂದು ಆ್ಯಮಿ ಹೇಳಿಕೊಂಡಿರುವುದು ಅಭಿಮಾನಿಗಳು ಕಣ್ಣು ಕಣ್ಣು ಬಿಡುವಂತಾಗಿದೆ.
2019ರ ಪ್ರಾರಂಭದಲ್ಲಿ ಬಾಯ್ ಫ್ರೆಂಡ್ ಜಾರ್ಜ್ ಪನಯೌಟ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ ಆ್ಯಮಿ ಜಾಕ್ಸನ್, ನಂತರದಲ್ಲಿ ಭಾವಿ ಪತಿ ಜತೆಗಿರುವ ವೈಯಕ್ತಿಕ ಫೋಟೋಗಳನ್ನು ಶೇರ್ ಮಾಡಿಕೊಂಡು ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ನಂತರ ಮದುವೆಯ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟು ಕೊಡದ ಆ್ಯಮಿ, ಡೈರೆಕ್ಟ ಪ್ರಸವದ ಕುರಿತು ಸುಳಿವು ನೀಡಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆ ವದಂತಿ ಮಾಸುವ ಮುನ್ನವೇ ಐಸ್ ಪೈಸ್ ಆಟ ಕೇಳುಗರಿಗೆ ತಲೆ ತಿರುಗುವಂತೆ ಮಾಡಿದೆ. ಮಗು ಹಡೆದ ಮೇಲಾದರೂ ಆ್ಯಮಿ ಜಾಕ್ಸನ್ ಸಪ್ತಪದಿ ತುಳಿಯುವರೋ ನೋಡ್ಬೇಕು..
ಅಂದಹಾಗೆ ಆ್ಯಮಿ ಜಾಕ್ಸನ್ ಹಾಲಿವುಡ್ ಮೂಲದ ನಟಿಯಾಗಿದ್ದು, ಭಾರತದಲ್ಲಿ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ದಿ ವಿಲನ್, ತಮಿಳಿನ ಐ, 2.0, ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
No Comment! Be the first one.