ಹಾಲಿವುಡ್ ಸಿನಿಮಾಗಳನ್ನು ನೋಡದ ಕನ್ನಡಿಗರಿಗೆ ಪ್ರೇಮ್ ದಿ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಆ್ಯಮಿ ಜಾಕ್ಸನ್ ಕರೆಸಿದ ಮೇಲಷ್ಟೇ ಆಕೆಯ ಪರಿಚಯವಾದದ್ದು. ಆದರೆ ದಿ ವಿಲನ್ ಚಿತ್ರವಾದ ಮೇಲಂತೂ ಆ್ಯಮಿ ಜಾಕ್ಸನ್ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದನ್ನು ಕಣ್ಣು ತುಂಬಿಕೊಂಡಿದ್ದ ಕನ್ನಡಿಗರು ಆ್ಯಮಿಗೆ ಫ್ಯಾನ್ ಗಳಾದದ್ದು ನಿಜವೇ.
https://www.instagram.com/p/B1JLjdIpQmx/?utm_source=ig_web_copy_link
ಮದುವೆಗೂ ಮುನ್ನವೇ ಗರ್ಭ ಧರಿಸಿರುವ ಆ್ಯಮಿ ಜಾಕ್ಸನ್ ಆನಂತರ ನಾಮಕಾವಸ್ಥೆಗೆ ತನ್ನ ಪ್ರಿಯಕರನೊಂದಿಗೆ ರಿಂಗ್ ಬದಲಿಸಿಕೊಂಡು ಸದ್ಯ ಮಗು ಪಡೆಯುವ ಉತ್ಸಾಹದಲ್ಲಿದ್ದಾರೆ. ತನ್ನ ಬೇಬಿ ಬಂಪ್ ನ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿರುವ ಆ್ಯಮಿ ಚಿತ್ರವಿಚಿತ್ರವಾದ ಗೆಟಪ್ ನಲ್ಲಿಯೂ ಮಿಂಚುತ್ತಿದ್ದಾರೆ. ಸದ್ಯ ಹೊಟ್ಟೆಯಲ್ಲಿ ಮಗುವಿರುವಾಗಲೇ ಯೋಗ ಮಾಡುವ ಫೋಟೋ ಹಾಕುವ ಮೂಲಕ ಆ್ಯಮಿ ಮತ್ತೆ ಸುದ್ದಿಯಾಗಿದ್ದಾರೆ. ಹೌದು.. ಇತ್ತೀಚಿಗೆ ತಾನು ಯೋಗ ಮಾಡಿರುವ ಕೆಲವೊಂದಿಷ್ಟು ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದು, ಅಭಿಮಾನಿಗಳ ಘೇರಾವ್ ಜತೆಗೆ ಬೈಗುಳವನ್ನು ಸಮಪ್ರಮಾಣದಲ್ಲಿ ಪಡೆಯುತ್ತಿದ್ದಾರೆ. ಮಗು ಹೊಟ್ಟೆಯಲ್ಲಿರುವಾಗ ಇಂತಹ ಸಾಹಸದ ಅವಶ್ಯಕತೆ ಇತ್ತಾ ಎಂಬ ಅಭಿಪ್ರಾಯಗಳನ್ನು ಕಮೆಂಟಿಗರು ಮಾಡುತ್ತಿದ್ದಾರೆ. ಸ್ವತಃ ಆ್ಯಮಿ ಜಾಕ್ಸನ್ ಶೇರ್ ಮಾಡಿರುವ ಫೋಟೋದಲ್ಲಿ ಕಂದುಬಣ್ಣದ ಬಟ್ಟೆಯನ್ನು ಆ್ಯಮಿ ಧರಿಸಿದ್ದು, ‘ನೆಸ್ಟಿಂಗ್, ರೆಸ್ಟಿಂಗ್ ಮತ್ತು ಮೀಡಿಯೇಟಿಂಗ್. ಈ ಮೂರರ ಮೂಲಕ ನನ್ನ ಮನಸ್ಸು ಮತ್ತು ಬುದ್ಧಿಯನ್ನು ಕ್ರಿಯಾಶೀಲವಾಗಿ ಇರಿಸಿಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.