ಒಂದು ಕಾಲವಿತ್ತು… ಕನ್ನಡದ ನಾಲ್ಕಾರು ಜನ ಸ್ಟಾರ್‌’ಗಳು ಕೈಲಿ ಬಾಟಲಿ ಹಿಡಿದು ಬಗೆಬಗೆಯ ಆಲ್ಕೋಹಾಲ್‌’ಗಳಿಗೆ ಜಾಹೀರಾತು ನೀಡಿದ್ದರು.  ಬೆಳಿಗ್ಗೆ ಹಾಲು, ರಾತ್ರಿ ಆಲ್ಕೊಹಾಲ್‌ ಗೆ ರೂಪದರ್ಶಿಯಾದ ಹೀರೋಗಳೂ ಇದ್ದಾರೆ.

ಡಾ. ರಾಜ್‌ ಕುಮಾರ್‌ ನಂದಿನಿ ಹಾಲಿಗೆ ಬಿಟ್ಟು ಬೇರೆ ಬ್ರಾಂಡ್‌’ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡವರಲ್ಲ. ಪುನೀತ್‌ ಸಿಕ್ಕಾಪಟ್ಟೆ ಪ್ರಾಡಕ್ಟುಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶಿವರಾಜ್‌ ಕುಮಾರ್‌ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಥರದ ಕೆಲವು ಕಂಪೆನಿಗಳ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಬಂದ ಆಫರುಗಳನ್ನೆಲ್ಲಾ ಒಪ್ಪಿದ್ದಿದ್ದರೆ ಬಹುಶಃ ಟಿವಿಯಲ್ಲಿ ಬರುವ ಮುಕ್ಕಾಲು ಭಾಗ ಅಡ್ವರ್ಟೈಸ್‌ʼಮೆಂಟುಗಳಲ್ಲಿ ಸೆಂಚುರಿ ಸ್ಟಾರ್‌ ಕಾಣಸಿಗುತ್ತಿದ್ದರು!

ಯಾವುದೇ ಒಂದು ಸಂಸ್ಥೆ ಅಥವಾ ಪ್ರಾಡಕ್ಟ್‌ ಗೆ ಬ್ರಾಂಡ್‌ ಅಂಬಾಸಡರ್‌ ಆಗುವ ಮುನ್ನ ಸಿನಿಮಾ ನಟ-ನಟಿಯರು ಇಂಡೆಮ್ನಿಟಿ ಅಗ್ರಿಮೆಂಟ್‌ ಒಂದನ್ನು ಮಾಡಿಕೊಂಡಿರುತ್ತಾರೆ. ಆ ಕರಾರಿನಲ್ಲಿ ʻಕಂಪೆನಿಯ ವಿರುದ್ಧ ಯಾವುದೇ ರೀತಿಯ ಕಾನೂನು ತೊಡಕುಗಳಾದರೆ, ಕಂಪೆನಿ ನಷ್ಟಕ್ಕೀಡಾದರೆ ಅಥವಾ ಸಾರ್ವಜನಿಕರಿಗೆ ಆ ಕಂಪೆನಿಯಿಂದ ನಷ್ಟವಾದರೆ ಅದಕ್ಕೆ ನಾವು ಹೊಣೆಗಾರಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲʼʼ ಎಂದು ಅದರಲ್ಲಿ ನಮೂದಾಗಿರುತ್ತದೆ. ಇದರಿಂದ ಸೆಲಬ್ರೆಟಿಗಳೇನೋ ಕಾನೂನಾತ್ಮಕ ಸಮಸ್ಯೆಗಳಿಂದ ಪಾರಾಗಿಬಿಡುತ್ತಾರೆ. ಆದರೆ, ಅವರನ್ನು ಅನುಕರಿಸುವ ಲೆಕ್ಕವಿಲ್ಲದಷ್ಟು ಜನ ಇವೆಲ್ಲಾ ಗೊತ್ತಿಲ್ಲದೆ ಹಳ್ಳಕ್ಕೆ ಬಿದ್ದಿರುತ್ತಾರೆ.

ಹೀಗಾಗಿ ಶಿವರಾಜ್‌ ಕುಮಾರ್‌ ಎಚ್ಚರಿಕೆಯಿಂದಲೇ ಜಾಹೀರಾತುಗಳನ್ನು ಒಪ್ಪಿಕೊಳ್ಳುವುದು. ಸದ್ಯ ಜೀವ ರಕ್ಷಕ ಅನ್ನಿಸಿಕೊಂಡಿರುವ ಅಮೃತ್‌ ನೋನಿ ಪ್ರಾಡಕ್ಟಿನ ಜಾಹೀರಾತಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಸರಿ ಸುಮಾರು  ನೂರೈವತ್ತಕ್ಕಿಂತಾ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ನೋನಿ ಸರ್ವರೋಗಕ್ಕೂ ಮದ್ದಿನಂತೆ ಕೆಲಸ ಮಾಡುತ್ತಿದೆ. ಮಾನಸಿಕ ಖಿನ್ನತೆ, ಅಲರ್ಜಿ, ವಾತ ಸಮಸ್ಯೆ, ಆಸ್ತಮಾ, ಕ್ಯಾನ್ಸರ್, ಗಂಟುನೋವು, ಕೂದಲು ಉದುರುವಿಕೆ, ಮೂತ್ರ ಜನಕಾಂಗದ ಕಾಯಿಲೆ, ಕ್ಷಯ, ಚರ್ಮದ ರೋಗಗಳಿಗೆಲ್ಲ ಇದು ರಾಮಬಾಣ ಅನ್ನೋದು ಸಂಶೋಧನೆಗಳಿಂದ ದೃಢಪಟ್ಟಿದೆ. ಜಗತ್ತಿನ ಮುಕ್ಕಾಲು ಪಾಲು ಜನರನ್ನು ಕಾಡುತ್ತಿರುವ ಡಯಾಬಿಟೀಸನ್ನೂ ನೋನಿ ಗುಣ ಮಾಡುತ್ತಿದೆಯಂತೆ.

ವಿಟಮಿನ್‌ ಸಿ, ಎ, ಬಿ3 ಮತ್ತು ಕಬ್ಬಿಣದ  ಅಂಶಗಳನ್ನು ಯಥೇಚ್ಚವಾಗಿ ಹೊಂದಿರುವ ನೋನಿ ನಿಜಕ್ಕೂ ಆರೋಗ್ಯ ಕಾಪಾಡುವ ವಿಚಾರದಲ್ಲಿ ಕ್ರಾಂತಿ ಸೃಷ್ಟಿಸುತ್ತಿದೆ. ಅಮೃತ್‌ ನೋನಿ ಸಂಸ್ಥೆ ನೋನಿಯ ಮೂಲದಿಂದ ತಯಾರಿಸಿದ ಒಟ್ಟು ಒಂಭತ್ತು ಪ್ರಾಡಕ್ಟುಗಳನ್ನು ಮಾರುಟ್ಟೆಗೆ ಬಿಟ್ಟಿದೆ. ವಿಜಯರಾಘವೇಂದ್ರ ಸೇರಿದಂತೆ ಹಲವರ ಜಾಹೀರಾತು ಈಗಾಗಲೇ ಪ್ರಸಾರವಾಗುತ್ತಿದೆ. ನೋನಿಯ ಬಹುಮುಖ್ಯ ಪದಾರ್ಥವೊಂದರ ಜಾಹೀರಾತಿನಲ್ಲಿ ಹ್ಯಾಟ್ರಿಕ್‌ ಹೀರೋ ಪಾಲ್ಗೊಂಡಿದ್ದಾರೆ. ಈಗಾಗಲೇ ಇದರ ಚಿತ್ರೀಕರಣ ಕೂಡಾ ಮುಗಿದಿದ್ದು, ಶೀಘ್ರದಲ್ಲೇ ಕಿರುತೆರೆ ಪರದೆಗಳಲ್ಲಿ ಶಿವಣ್ಣ ನೋನಿ ಸಮೇತ ಪ್ರತ್ಯಕ್ಷವಾಗಲಿದ್ದಾರೆ.

ಯಾವ ಕೋನದಿಂದಲೂ ಜನಕ್ಕೆ ಮಾರಕವಲ್ಲದ, ಜೀವಾಮೃತ ಅಮೃತ್ ನೋನಿ ಜಾಹೀರಾತಿನಲ್ಲಿ ನಟಿಸಿರುವ ಶಿವಣ್ಣನಿಗೆ ನಮಸ್ಕಾರ….

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅವಳ ಕಿವಿ ಅಗಲ, ನೋಡಲು ಸುಮಾರಾಗಿದ್ದಾಳೆ ಅಂದಿದ್ದರು….!

Previous article

ಅಭಿಮಾನಿಯ ತಿಥಿಗೆ ಹೋಗ್ತಾರಾ ದರ್ಶನ್?‌

Next article

You may also like

Comments

Leave a reply

Your email address will not be published.