ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಾಯಕಿ ಮೈಸೂರಿನ ಅಮೃತಾಗೆ ಸಿನಿಮಾ ಬಿಡುಗಡೆಗೂ ಮುನ್ನವೇ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ. ಸದ್ಯ ಅಮೃತಾ ಚಿರಂಜೀವಿ ಸರ್ಜಾ ನಟನೆಯ ನೂತನ ಸಿನಿಮಾ, ಧನಂಜಯ್ ನಟನೆಯ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದು, ತಮಿಳಿನಿಂದಲೂ ಅಮೃತಾಗೆ ಆಫರ್ ಗಳು ಬರುತ್ತಿವೆ ಎನ್ನಲಾಗುತ್ತಿದೆ.
ಈ ಕುರಿತು ಸಂತಸವನ್ನು ವ್ಯಕ್ತಪಡಿಸಿರುವ ಅಮೃತಾ “ನಾನು ನಟಿಸುತ್ತಿರುವ ಪ್ರತಿ ಸಿನಿಮಾದಲ್ಲಿಯೂ ಹೊಸ ರೀತಿಯ ಪಾತ್ರಗಳು ಸಿಕ್ಕಿರುವುದು ನನ್ನ ಅದೃಷ್ಟ. ಅದರಲ್ಲೂ ಚಿರಂಜೀವಿ ಸರ್ಜಾ ಅವರ ಸಿನಿಮಾದಲ್ಲಿನ ಪಾತ್ರ ಬಹಳ ಚೆನ್ನಾಗಿದೆ. ಅದರಲ್ಲಿ ನಾನು ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಮಂಜುಳಾ ನಟಿಸಿದ ರೀತಿಯಲ್ಲಿ ಕಾಣಿಸಿಕೊಂಡಿದ್ದೇನೆ. ಲವ್ ಮಾಕ್ಟೇಲ್ ಮತ್ತು ಓ ಸಿನಿಮಾದಲ್ಲಿ ಮಿಲನಾ ಅವರ ಜತೆ ನಟಿಸಿದ್ದೇನೆ” ಎಂದರು.