ನಟಿ ಅಮೂಲ್ಯ ಎಂದಾಕ್ಷಣ ನೆನಪಿಗೆ ಬಾರದಿದ್ದರೂ, ಚೆಲುವಿನ ಚಿತ್ತಾರದ ಐಸೂ ಎಂದರೆ ಸಾಕು. ನವ ಯುವಕರ ಕಿವಿ ನೆಟ್ಟಗಾಗುತ್ತದೆ. ಅಷ್ಟರಮಟ್ಟಿಗೆ ಆ ಸಿನಿಮಾ, ಐಸೂ, ಮಾದೇಶನ ಕಾಂಬಿನೇಷನ್ನು ಕನ್ನಡಿಗರ ಹೃದಯ ಮುಟ್ಟಿದೆ. ತೀರ ಚಿಕ್ಕ ವಯಸ್ಸಿನಲ್ಲಿಯೇ ಹಿರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಸೂ ಉರುಫ್ ಅಮೂಲ್ಯ ಬಹುತೇಕ ಹಿಟ್ ಸಿನಿಮಾಗಳಲ್ಲಿಯೇ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅತ್ಯಧಿಕ ಬೇಡಿಕೆ ಇರುವಾಗಲೇ ಸಿನಿಮಾ ಇಂಡಸ್ಟ್ರಿಗೆ ಬ್ರೇಕ್ ಕೊಟ್ಟು, ಮದುವೆ ಆಗಿ ದಾಂಪತ್ಯ ಜೀವನದಲ್ಲಿ ಹಾಯಾಗಿದ್ದರು. ಮತ್ತೆ ಇಂಡಸ್ಟ್ರಿಗೆ ಕಮ್ ಬ್ಯಾಕ್ ಆಗೋದಕ್ಕೂ ತುದಿಗಾಲಿನಲ್ಲಿದ್ದರೂ ಅನ್ನೋದು ಗಾಳಿಸುದ್ದಿಯಾದರೂ ಸದ್ಯ ಆ ಗಾಳಿಸುದ್ದಿಯೇ ನಿಜವಾಗಲಿದೆ. ಹೌದು.. ಚೆಲುವಿನ ಚೆಲುವೆ ಅಮೂಲ್ಯ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ಸಾಗಲಿದ್ದಾರಂತೆ.
ಸಿನಿಮಾ ರೀ ಎಂಟ್ರಿ ಆಗುವ ಸಲುವಾಗಿಯೇ ದೇಹದ ಟೋನಿಂಗ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕ್ ಔಟ್ ಶುರು ಮಾಡಿದ್ದಾರೆ. ಮದುವೆಯಾದ ಬಳಿಕ ತುಸು ದಪ್ಪಗಾಗಿದ್ದ ಐಸೂ ಮತ್ತೆ ಹಿಂದಿನ ಅಮೂಲ್ಯ ಚಾರ್ಮ್ ನಲ್ಲಿ ಬಣ್ಣ ಹಚ್ಚೋಕೆ ಕೊಂಚ ಸ್ಟ್ರಿಕ್ಟ್ ಆಗಿಯೇ ಪ್ರಿಪರೇಷನ್ ನಡೆಸುತ್ತಿದ್ದಾರೆ. ಮಾವ ಚುನಾವಣೆಗೆ ನಿಂತ ಸಂದರ್ಭದಲ್ಲಿ ಮಾವನ ಪರ ಪ್ರಚಾರ ಕಾರ್ಯದಲ್ಲೂ ಕೈ ಜೋಡಿಸಿದ್ದ ಅಮೂಲ್ಯ, ತನ್ನನ್ನು ರಾಜಕೀಯವಾಗಿ ಗುರುತಿಸಿಕೊಂಡಿದ್ದರು. ಅಂದಹಾಗೆ ಯಾವ ಸಿನಿಮಾ ಮಾಡಬಹುದು, ಮಾಡ್ತಾರೆ, ಯಾರ ಜೊತೆ, ಮಾವ ನವರೇ ಸಿನಿಮಾ ನಿರ್ಮಾಣ ಮಾಡಲಿದ್ದಾರಾ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಂತೂ ಸಿಕ್ಕಿಲ್ಲ. ಮೊದಲು ಬಣ್ಣದ ಲೋಕಕ್ಕೆ ಐಸು ಕಾಲಿಟ್ಟರೇ ಸಾಕಲ್ಲವೇ..!
No Comment! Be the first one.