ಆ್ಯಮಿ ಜಾಕ್ಸನ್ ತನ್ನ ಪ್ರೆಗ್ನೆನ್ಸಿ ಕುರಿತಾಗಿ ಮಾಹಿತಿಯನ್ನು ಬಿಟ್ಟು ಬಿಡದೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಇತ್ತೀಚಿಗೆ ಪ್ಯಾಂಟಿಲ್ಲದೇ ತನ್ನ ಬೇಬಿ ಬಂಪ್ ಪೋಸ್ ನೀಡಿರುವ ಪೋಟೋ ಶೇರ್ ಮಾಡಿ ಕಮೆಂಟುಗಳ ಸುರಿಮಳೆಯನ್ನೇ ಪಡೆದಿದ್ದರು. ಸದ್ಯ 23 ವಾರಗಳ ಗರ್ಭವತಿಯಾಗಿರುವ ಆ್ಯಮಿ ಆಸ್ಪತ್ರೆಯಲ್ಲಿ ತನ್ನ ಗರ್ಭದ ಸ್ಕ್ಯಾನ್ ಮಾಡುತ್ತಿರುವ ವಿಡಿಯೋವೊಂದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಆ್ಯಮಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
https://www.instagram.com/p/ByDwfCdHryU/?utm_source=ig_web_copy_link
ಮದುವೆಗೂ ಮುನ್ನವೇ ತನ್ನ ಬಾಯ್ ಫ್ರೆಂಡ್ ಜಾರ್ಜ್ ಪ್ಯಾನಿಯೋಟ್ ನಿಂದ ಪ್ರೆಗ್ನೆಂಟ್ ಆಗಿದ್ದ ಆ್ಯಮಿ ಜಾಕ್ಸನ್ ಆನಂತರ ಅವರೊಂದಿಗೆ ಎಂಗೇಜ್ ಮೆಂಟನ್ನು ಸಹ ಮಾಡಿಕೊಂಡಿದ್ದರು. ಸದ್ಯ ವಿಜಯ್ ನಿರ್ದೇಶನ ಮಾಡುತ್ತಿರುವ ಮದರಸಪಟ್ಟನಮ್ ಸಿನಿಮಾದಲ್ಲಿ ಆ್ಯಮಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಹಾಲಿವುಡ್ ನ ಸೂಪರ್ ಗರ್ಲ್ ಸಿರೀಸ್ ನಲ್ಲಿಯೂ ನಟಿಸುತ್ತಿದ್ದಾರೆ.
No Comment! Be the first one.