ಈಗೀಗ ಪ್ರೆಗ್ನಿಂಟ್ ಆಗುವುದು ಒಂದು ಕಡೆಯಾದರೆ ಅದಾದ ಮೇಲೆ ಮಗು ಆಗುವವರೆಗೂ ತಮ್ಮ ಬೇಬಿ ಬಂಪ್ ನಲ್ಲಿ ಫೋಟೋಗೆ ಪೋಸ್ ಕೊಡುವುದು ಒಂದು ರೀತಿಯ ಟ್ರೆಂಡ್ ಆಗಿ ಹೋಗಿದೆ. ಅದರಲ್ಲೂ ಬಾಲಿವುಡ್ ಮಂದಿ ಇಂತಹ ವಿಚಿತ್ರ ಖಯಾಲಿಗಳಲ್ಲಿ ಎತ್ತಿದ ಕೈ. ಇದನ್ನು ನೋಡಿದ ಸ್ಯಾಂಡಲ್ ವುಡ್ ನ ಮಂದಿಯೂ ಅದನ್ನು ಫಾಲೋ ಮಾಡಿ, ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮಂಗಳಾರತಿಯನ್ನು ಮಾಡಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಮದುವೆಗೂ ಮುನ್ನವೇ ಬಸಿರಾಗಿ ಸದ್ಯ ಮದುವೆಯಾಗಲು ಅಣಿಯಾಗುತ್ತಿರುವ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್ ಕೂಡ ಇಂತಹುದೇ ವಿಚಿತ್ರ ಫ್ಯಾಷನ್ ಮೊರೆಹೋಗಿದ್ದಾರೆ. ಗರ್ಭಿಣಿಯಾದ ಮೇಲೆ ಸಾಕಷ್ಟು ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಆ್ಯಮಿ ಜಾಕ್ಸನ್ ಮತ್ತೆ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
https://www.instagram.com/p/B03XXrwJEbb/?utm_source=ig_web_copy_link
ಸದ್ಯ ಲಂಡನ್ನಲ್ಲಿ ವಾಸವಿರುವ 27 ವರ್ಷ ಹರೆಯದ ಆ್ಯಮಿ ಜಾಕ್ಸನ್ ಬುಧವಾರ ಸಂಜೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳು ಬೆರಗಾಗುವಂತಹ ಫೋಟೊವನ್ನು ಅಪ್ಲೋಡ್ ಮಾಡಿದ್ದಾರೆ. ಅರೆ ನಗ್ನ ಸ್ಥಿತಿಯಲ್ಲಿ ತನ್ನ ಎರಡು ಕೈಗಳಿಂದ ಎದೆಯನ್ನು ಮುಚ್ಚಿಕೊಂಡು ಉಬ್ಬಿದ ಹೊಟ್ಟೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ವಿಶ್ರಾಂತಿ ಸಮಯವನ್ನು ತೋಟದಲ್ಲಿ ಕಳೆಯುತ್ತಿದ್ದೇವೆ. ನಮ್ಮ ಪುಟ್ಟ ಪ್ರಪಂಚಕ್ಕಾಗಿ ಎದುರು ನೋಡುತ್ತಿದ್ದೇವೆ. ಗರ್ಭಿಣಿಯಾಗಿ 33 ವಾರಗಳು ಕಳೆದಿವೆ ಎಂದು ಬರೆದುಕೊಂಡಿದ್ದಾರೆ. ಜಾಕ್ಸನ್ ಅಪ್ಲೋಡ್ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಕಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ.