ಮಳೆ ಪ್ರವಾಹದಿಂದ ತತ್ತರಿಸಿದ್ದ ಕೊಡಗಿನ ಮಡಿಲಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡುತ್ತಿದ್ದು, ಯೋಗಿ ದ್ವಾರಕೀಶ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಹಾಡು ಹಾಗೂ ಫೈಟಿಂಗ್ ಸೀಕ್ವೆನ್ಸ್ ಗಳನ್ನು ಮಲೆನಾಡಿನ ಕಲ್ಲುಕ್ವಾರಿ ಹಾಗೂ ಕೊಯನಾಡಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿದೆ.
ಶಿವಣ್ಣನಿಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲಾ, ರಂಗಾಯಣ ರಘು, ಸುಹಾಸಿನಿ, ಅನಂತ್ ನಾಗ್ ಸೇರಿದಂತೆ ಬಹುದೊಡ್ಡ ತಾರಾಂಗಣವೇ ಆನಂದ್ ನಲ್ಲಿದೆ. ಈಗಾಗಲೇ ರಾಜ್ಯದ ವಿವಿದೆಡೆ 67 ದಿನ ಶೂಟಿಂಗ್ ಮುಗಿಸಿಕೊಂಡಿದೆ. ಕೊಡಗಿನಲ್ಲಿ 6 ದಿನಗಳ ಚಿತ್ರೀಕರಣವಿದ್ದು, ಬಳಿಕ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ.
No Comment! Be the first one.