ನಟ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಆನಂದ್ ಚಿತ್ರದ ಶೂಟಿಂಗ್ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಆಸುಪಾಸು ನಡೆದಿದ್ದು, ಚಿತ್ರೀಕರಣಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂದ್ ಸಿನಿಮಾಕ್ಕಾಗಿ ಭೂತ ಕೋಲ ಮಾದರಿಯಲ್ಲಿ ಚಿತ್ರೀಕರಣ ನಡೆದಿದ್ದು, ಧಾರ್ಮಿಕ ನಿಯಮ ಪಾಲಿಸದೆ ಸೆಟ್ ಹಾಕಿ ಚಿತ್ರೀಕರಿಸಿದ ಆರೋಪ ಕೇಳಿಬಂದಿದೆ.
ಪೊಟ್ಟಂ ತೆಯ್ಯಂ ಕೋಲ ಮತ್ತು ಕೆಂಡ ಸೇವೆಯ ದೃಶ್ಯ ಚಿತ್ರೀಕರಣ ನಡೆದಿದ್ದು, ಕೇರಳದ ಮನು ಮಣಿಕರ್ ಮತ್ತು ಬಳಗದ ಸಹಕಾರದಲ್ಲಿ ಶೂಟಿಂಗ್ ಮಾಡಲಾಗಿದೆ. ಪಿ.ವಾಸು ನಿರ್ದೇಶನದ ಬಹುನಿರೀಕ್ಷಿತ ಆನಂದ್ ಚಿತ್ರವನ್ನ ತುಳುನಾಡಿನ ದೈವ ಕೋಲದ ರೀತಿ-ರಿವಾಜು ಗಾಳಿಗೆ ತೂರಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರತಂಡ ನಟಿ ರಚಿತಾ ರಾಮ್ ನೈಜ ದೈವ ಸೇವೆ ನೀಡುವ ದೃಶ್ಯ ಚಿತ್ರೀಕರಿಸಿದೆ. ಚಿತ್ರೀಕರಣ ನಡೆಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದು, ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Leave a Reply
You must be logged in to post a comment.