ಸ್ಟೂಡೆಂಟ್ 2 ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆದ ಅನನ್ಯ ಪಾಂಡೆ ಆ ನಂತರ ಮುಟ್ಟಿದೆಲ್ಲವೂ ಚಿನ್ನವಾಗುವಂತಾಗಿದೆ. ತಮ್ಮ ಚೊಚ್ಚಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ 2 ಹಿಟ್ ಅಗುತ್ತಿದ್ದಂತೆ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳಲು ಉತ್ಪನ್ನ ತಯಾರಕ ಕಂಪನಿಗಳು ಮುಗಿಬಿದ್ದಿದ್ದಾರಂತೆ. ಸದ್ಯ ಅನನ್ಯಾ ಪಾಂಡೆ ಈಗ ಫ್ಯಾಷನ್ ಬ್ರಾಂಡ್ ಒಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರೋದು ವಿಶೇಷ.
ಸಿನಿಮಾದಲ್ಲಿ ತನ್ನ ವೈವಿದ್ಯಮಯ ಅಭಿನಯದ ಮೂಲಕ ಪಡ್ಡೆ ಹುಡುಗರ ಹಾರ್ಟ್ ಕದ್ದಿರುವ ಅನನ್ಯಾ ಸೋಶಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಫಾಲೋವರ್ಸ್ ಗಳನ್ನೇ ಹೊಂದಿದ್ದಾರೆ. ಅನನ್ಯ ಅವರ ಸ್ಟೈಲು, ಅವರ ಫ್ಯಾಷನ್ ಸೆನ್ಸು, ಬಟ್ಟೆಗಳ ವಿನ್ಯಾಸ, ಅವರು ತಮ್ಮ ಬಟ್ಟೆಗಳನ್ನು ಸೆಲೆಕ್ಟ್ ಮಾಡಿಕೊಳ್ಳುವ ರೀತಿ ನೀತಿಯೇ ಅನನ್ಯ ಅವರನ್ನು ಆರಿಸಿಕೊಳ್ಳಲು ಕಾರಣ ಎನ್ನುತ್ತಾರೆ ಕಂಪನಿಯ ಮುಖ್ಯಸ್ಥರು.
No Comment! Be the first one.