ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. “ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ ಎಂದು ನಿರ್ದೇಶಕ ಚಲ ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ನೋಡಿದರೆ, ನಿಜಕ್ಕೂ ಈ ಸಿನಿಮಾದಲ್ಲಿ ಗಂಭೀರವಾದ ವಿಚಾರವೊಂದು ಪ್ರಸ್ತಾಪವಾಗಿದೆ. ವೈದ್ಯರ ಬೇಜವಬ್ದಾರಿ ಒಂದಿಡೀ ಬದುಕನ್ನು ಹೇಗೆ ಹಿಂಸೆಗೆ ಗುರಿಪಡಿಸುತ್ತದೆ ಎನ್ನುವ ಸಣ್ಣದೊಂದು ಎಳೆ ಇಟ್ಟುಕೊಂಡು ಸಿನಿಮಾದ ಕೊನೇ ತನಕ ಅದರ ಸುಳಿವು ಬಿಡದೆ ನಿರೂಪಿಸಿದ್ದಾರೆ ನಿರ್ದೇಶಕ ಚಲ. ಅಲ್ಲಲ್ಲಿ ಚಿತ್ರಕತೆ ಎಡವಿದಂತೆ, ಸಥೆ ಸಪ್ಪೆಯಂತೆ ಅನಿಸಿದರೂ ಸಿನಿಮಾದ ಕೊನೆಯಲ್ಲಿ ಅದೆಲ್ಲ ಮರೆಯುವಂತಾ ಕಂಟೆಂಟ್ ಇದೆ. ಏಲಿಯನ್ಸ್, ಯು.ಎಫ್.ಓ. ಪ್ರೀತಿ, ವ್ಯಾಧಿ… ಸೂತ್ರ ಸಂಬಂಧವಿಲ್ಲದ ವಿಚಾರಗಳನ್ನೆಲ್ಲಾ ತಂದು ಒಂದು ಕಡೆ ಜೋಡಿಸಿ ನೋಡುಗರನ್ನು ನಂಬಿಸಿರುವುದು ನಿರ್ದೇಶಕರ ಕ್ರಿಯೇಟಿವಿಟಿ ಅಂದುಕೊಳ್ಳಬಹುದು.
ಪೂರಾ ಸಿನಿಮಾವನ್ನು ನೋಡುವಂತೆ ಮಾಡಿರುವ ಛಾಯಾಗ್ರಾಹಕ ಹರೀಶ್ ಸೊಂಡೆಕೊಪ್ಪ ನಿಜಕ್ಕೂ ಪ್ರತಿಭಾವಂತ. ದೃಶವಾಗಿ ಹೇಳಲು ಸಾಧ್ಯವಿಲ್ಲದ ಕತೆಯನ್ನೂ ಹರೀಶ್ ಜಾಣ್ಮೆಯಿಂದ ಸೆರೆ ಹಿಡಿದಿದ್ದಾರೆ. ಚಿತ್ರರಂಗ ಉತ್ತಮವಾಗಿ ಬಳಸಿಕೊಂಡಿದೇ ಆದಲ್ಲಿ ಹರೀಶ್ ಇಲ್ಲಿ ಸಾಕಷ್ಟು ಫ್ರೆಶ್ ಎನಿಸುವ ಪ್ರಾಡಕ್ಟುಗಳನ್ನು ಸೃಷ್ಟಿಸಬಲ್ಲರು.
ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ ಇಂಪಾಗಿವೆ., ಗುರುಕಿರಣ್ ಹಿನ್ನೆಲೆ ಸಂಗೀತ ಸಿನಿಮಾದ ಶಕ್ತಿ, ಅರ್ಜುನ್ ಕಿಟ್ಟು ಸಂಕಲನ ಇನ್ನೊಂಚೂರು ಮೊನಚಾಗಬೇಕಿತ್ತು, ಮುರಳಿ ನೃತ್ಯ ನಿರ್ದೇಶನ ಪರವಾಗಿಲ್ಲ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ಗೀತ ಸಾಹಿತ್ಯ ಅಳತೆಗೆ ತಕ್ಕಷ್ಟಿದೆ. ಜೈ ನಾಟಕೀಯತೆ ತೋರದೆ ನಟಿಸಿದ್ದಾರೆ. ಅನುಷಾ ರಂಗನಾಥ್ ಮೈಮರೆತು ನಟಿಸಿದ್ದಾರೆ. ಹರೀಶ್ ರೈ, ಕೆ.ಎಸ್. ಶ್ರೀಧರ್, ಕೆ.ವಿ. ಮಂಜಯ್ಯ, ರೇಖಾ ಸಾಗರ್, ರೋಜಾ ಮುಂತಾದವರು ಗಮನ ಸೆಳೆಯುತ್ತಾರೆ.
No Comment! Be the first one.