ಹೊಸಬರೇ ಸೇರಿ ಸಿದ್ದ ಮಾಡಿರುವ ಚಿತ್ರ ‘ಅಂದವಾದ’. ಜೈ ಹಾಗು ಅನುಷಾ ಜೋಡಿಯಾಗಿ ಕಾಣಿಸಿಕೊಂಡಿರುವ ಈ  ಸಿನಿಮಾದಲ್ಲಿ ಸಂಗೀತಕ್ಕೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ವಿಕ್ರಮ್ ವರ್ಮನ್ ಸಂಗೀತ ಸಂಯೋಜನೆಯನ್ನು ಮಾಡಿ ಈಗಾಗಲೇ ಗೆಲುವು ಕಂಡಿದ್ದಾರೆ.

ಅದರಲ್ಲೂ ಜಯಂತ್ ಕಾಯ್ಕಿಣಿ ಅವರೇ ಬರೆದಿರುವ ಟೈಟಲ್ ಟ್ರ್ಯಾಕ್ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿದ್ದು, ವಿಶೇಷವೆಂದರೆ ಈ ಹಾಡನ್ನು  ವಿಜಯ್ ಪ್ರಕಾಶ್ ಹಾಗೂ ದಕ್ಷಿಣ ಭಾರತದಲ್ಲಿ ಜ್ಯೂನಿಯರ್ ಶ್ರೇಯಾ ಘೋಷಾಲ್ ಎಂದೇ ಖ್ಯಾತಿ ಪಡೆದಿರುವ ಅಲಾ ಬಿ ಬಾಲ ಹಾಡಿದ್ದಾರೆ. ಮಲಯಾಳಂ ನಲ್ಲಿ ಗುರುತಿಸಿಕೊಂಡಿರುವ ಅಲಾ ಬಿ ಬಾಲ ಇದೇ ಮೊದಲ ಬಾರಿಗೆ ಅಂದವಾದ ಮೂಲಕ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಲಿದ್ದಾರೆ. ಅಂದವಾದ ಚಿತ್ರಕ್ಕೆ ಚಲ ಆ್ಯಕ್ಷನ್ ಕಟ್ ಹೇಳಿದ್ದು, ಬಹುತೇಕ ವಿಡಿಯೋ ಸಾಂಗ್ ಹಾಗೂ ಲಿರಿಕಲ್ ಹಾಡುಗಳು ಕೇಳುಗರನ್ನು ಇಂಪ್ರೆಸ್ ಮಾಡುವಲ್ಲಿಯೂ ಸಕ್ಸಸ್ ಆಗಿದೆ.

CG ARUN

ಒಡೆಯನ ದರ್ಬಾರ್ ಗೆ ಕಾಲ ಸನ್ನಿಹಿತ!

Previous article

ಮೆಲ್ಬರ್ನ್ ಚಿತ್ರೋತ್ಸವಕ್ಕೆ  ಕನ್ನಡ ಚಿತ್ರ ಒಂದಲ್ಲಾ ಎರಡಲ್ಲಾ!

Next article

You may also like

Comments

Leave a reply

Your email address will not be published. Required fields are marked *