ಸಂಭಾಷಣೆಕಾರರಾಗಿ ಪ್ರಸಿದ್ಧರಾಗಿರೋ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕಿಳಿದ ಬಗ್ಗೆ ಸದ್ಯ ಸುದ್ದಿ ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸೋದು ಪಕ್ಕಾ ಆಗಿತ್ತಾದರೂ ಟೈಟಲ್ ಮಾತ್ರ ನಿಕ್ಕಿಯಾಗಿರಲಿಲ್ಲ. ಇದೀಗ ಗಣೇಶನ ಹಬ್ಬದ ಶುಭ ಸಂದರ್ಭದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ!
ಅನೀಶ್ ತೇಜೇಶ್ವರ್ ಅವರ ಹೊಸಾ ಚಿತ್ರಕ್ಕೆ ಕೇಡಿ ನಂಬರ್ ೧ ಎಂಬ ನಾಮಕರಣವಾಗಿದೆ!
ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರವೂ ಸೇರಿದಂತೆ ಈ ವರೆಗಿನ ಸಿನಿ ಯಾನದಲ್ಲಿ ಸ್ಟೈಲಿಶ್ ಲುಕ್ಕಿನಲಲ್ಲಿ ಕಾಣಿಸಿಕೊಂಡಿದ್ದವರು ಅನೀಶ್ ತೇಜೇಶ್ವರ್. ಕೇಡಿ ನಂಬರ್ ಒನ್ ಚಿತ್ರದ ಮೂಲಕ ಮೊದಲ ಸಲ ಅವರು ಹಳ್ಳಿ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರೆ. ಪ್ರಶಾಂತ್ ರಾಜಪ್ಪ ನಿರ್ದೇಶನದಲ್ಲೊಂದು ಚಿತ್ರ ಬರಲಿದೆ ಎಂಬ ಸುದ್ದಿ ಹೊರ ಬಿದ್ದಾಗಲೇ ಜನ ಕುಹೂಹಲಗೊಂಡಿದ್ದರು. ಇದೀಗ ಫಿಕ್ಸಾಗಿರೋ ಟೈಟಲ್ ಅದನ್ನು ಮತ್ತಷ್ಟು ತೀವ್ರವಾಗಿಸಿದೆ.
ಪ್ರಶಾಂತ್ ರಾಜಪ್ಪ ಕಾಮಿಡಿ ಮತ್ತು ಹಳ್ಳಿ ಘಮಲಿನ ಸಂಭಾಷಣೆಯ ಮೂಲಕವೇ ಹೆಸರಾದವರು. ಅವರು ನಿರ್ದೇಶಕರಾಗಿರೋ ಈ ಚಿತ್ರ ಹಳ್ಳಿಯೊಂದರ ಕಥಾನಕ ಹೊಂದಿದೆಯಂತೆ. ಇದಕ್ಕೆ ಕೇಡಿ ನಂಬರ್ ಒನ್ ಅಂತ ಶೀರ್ಷಿಕೆ ನಿಗಧಿಯಾಗಿರೋದರಿಂದ ಭಿನ್ನವಾದೊಂದು ಕಥೆಯ ನಿರೀಕ್ಷೆ ಖಂಡಿತಾ ಹುಟ್ಟಿಕೊಳ್ಳುತ್ತದೆ. ಹಳ್ಳಿ ಕಥೆ ಕಂ ಕಾಮಿಡಿ ಝಲಕ್ಕಿನಲ್ಲಿ ಅನೀಶ್ ತೇಜೇಶ್ವರ್ ದೊಡ್ಡ ಮಟ್ಟದಲ್ಲಿಯೇ ಮುಂಚೂಣಿಗೆ ಬರೋ ಸಾಧ್ಯತೆಯಂತೂ ಖಂಡಿತಾ ಇದ್ದೇ ಇದೆ.
ಗಣೇಶನ ಹಬ್ಬದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆಯೇ ಶೀರ್ಷಿಕೆ ಅನಾವರಣಗೊಳಿಸಿರುವ ಚಿತ್ರ ತಂಡ ಅಕ್ಟೋಬರ್ ಹತ್ತೊಂಬತ್ತರಂದು ಫಸ್ಟ್ ಲುಕ್ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಅ ನಂತರದಲ್ಲಿ ಕೇಡಿ ನಂಬರ್ ಒನ್ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.
#