ಹೋಳಿ ಹಬ್ಬದ ಸಂಭ್ರಮಕ್ಕೆ ರಂಗು ತುಂಬಲಿದೆ ರಂಗ್ ದೇ ಬೆಂಗಳೂರು!ಬೆಂಗಳೂರು ಹಿಂದೆಂದೂ ಕಂಡರಿಯದಂಥಾ ಹೋಳಿ ಸಂಭ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ಈ ಬಣ್ಣಗಳ ಹಬ್ಬ ಅವರವರ ಭಾವಕ್ಕೆ, ಸಂಪ್ರದಾಯಗಳಿಗೆ ತಕ್ಕಂತೆ ಈವರೆಗೂ ಆಚರಿಸಲ್ಪಡುತ್ತಾ ಬಂದಿದೆ. ಆದರೆ ಇದನ್ನೂ ಒಂದು ಎಲ್ಲರೂ ಕೂಡಿ ಸಂಭ್ರಮಿಸೋ ಹಬ್ಬದಂತಾಗಿಸುವ ವಿಭಿನ್ನ ರಂಗ್ ದೇ ಬೆಂಗಳೂರು ಎಂಬ ಈವೆಂಟ್ ಒಂದನ್ನು ಆಯೋಜಿಸಲಾಗಿದೆ. ಇದರ ಸಾರಥ್ಯ ವಹಿಸಿಕೊಂಡಿರುವವರು ಮೀಡಿಯಾ ಸ್ಟೇಷನ್ ಮುಖ್ಯಸ್ಥರಾದ ವರುಣ್.
ಇದೇ ಮಾರ್ಚ್ 23ರಂದು ನಾಗರಬಾವಿಯಲ್ಲಿರೋ ರೆಸಾರ್ಟ್ ಒಂದರಲ್ಲಿ ಈ ಈವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವೆಂದರೆ ಕನ್ನಡ ಚಿತ್ರರಂಗದ ತಾರೆಯರನೇಕರು ಈ ಹೋಳಿ ಹಬ್ಬಕ್ಕೆ ಸಾಥ್ ನೀಡಲಿದ್ದಾರೆ. ಹಲವಾರು ಪ್ರಸಿದ್ಧ ಡಿಜೆ, ಗಾಯಕರೂ ಇದರ ಭಾಗವಾಗಲಿದ್ದಾರೆ. ಹರ್ಷಿಕಾ ಪುಣಚ್ಚ, ಚಂದನಾ ಗೌಡ, ಕಾವ್ಯಾ ಶಾಸ್ತ್ರಿ, ಸ್ಮೈಲ್ ಗುರು ರಕ್ಷಿತ್, ಕಿರಣ್ ರಾಜ್, ಕಿರಿಕ್ ಕೀರ್ತಿ, ಗಾಯಕ ನವೀನ್ ಸಜ್ಜು, ಡಿಜೆ ಸಾಗರ್ ಸೇರಿದಂತೆ ಅನೇಕರು ಈ ಈವೆಂಟ್ ಗೆ ಹೊಸಾ ಮೆರುಗು ನೀಡಲಿದ್ದಾರೆ. ನಾಗರಬಾವಿಯಿಂದ ನಾಲಕ್ಕು ಕಿಲೋಮೀಟರ್ ನಷ್ಟು ದೂರದಲ್ಲಿರೋ ಸುಂದರ ರೆಸಾರ್ಟ್ ಒಂದರಲ್ಲಿ ಈ ಈವೆಂಟ್ ನಡೆಸಲು ವರುಣ್ ಅವರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಆ ದಿನ ಇಲ್ಲಿ ರೇನ್ ಡ್ಯಾನ್ಸ್, ಪೂಲ್ ಪಾರ್ಟಿ ಮತ್ತು ನಾನ್ ಸ್ಟಾಪ್ ಸಂಗೀತ ಇರಲಿದೆ. ಹಾನಿಕಾರಕ ರಾಸಾಯನಿಕ ಬಣ್ಣಗಳಿಲ್ಲಿ ನಿಶಿದ್ಧ. ನೈಸರ್ಗಿಕ ಬಣ್ಣಗಳಲ್ಲಿಯೇ ಹೋಳಿಯಾಡಿ ಸಂಭ್ರಮಿಸೋ ಸದಾವಕಾಶವನ್ನು ಈ ಮೂಲಕ ಜನರಿಗೆ ಕಲ್ಪಿಸಲಾಗಿದೆ.
ಮಾರ್ಚ್ 23ರಂದು ಬೆಳಗ್ಗೆ 11ಗಂಟೆಯಿಂದ ಶುರುವಾಗೋ ಈ ಈವೆಂಟ್ ರಾತ್ರಿ ಹನ್ನೊಂದರ ವರೆಗೂ ಮುಂದುವರೆಯಲಿದೆ. ಕುಟುಂಬ ಸಮೇತರಾಗಿ ಎಂಜಾಯ್ ಮಾಡಬಹುದಾದ ಈ ಈವೆಂಟಿಗೆ ನಾಲಕ್ಕು ಬಗೆಯ ಟಿಕೆಟ್‌ಗಳನ್ನು ನಿಗಧಿಪಡಿಸಲಾಗಿದೆ. ಈ ಬಗ್ಗೆ ಮೀಡಿಯಾ ಸ್ಟೇಷನ್ ವೆಬ್ ಸೈಟ್ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.