ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪ್ರತಿಷ್ಟಿತ ಶಾಲೆಗಳಲ್ಲಿ ಸೀಟು ಪಡೆಯಲು ಪೋಷಕರು ಮಾಡುವ ಸರ್ಕಸ್ಸು ಅನುಭವಿಸಿದವರಿಗೆ ಗೊತ್ತು. ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಆ ಫೀಸು, ಈ ಫೀಸೆಂದು ಅಗತ್ಯಕ್ಕಿಂತ ಹೆಚ್ಚಿನ ಹಣವನ್ನೇ ಪೀಕಲು ತುದಿಗಾಲಿನಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಈಗ ವಿದ್ಯಾದಾನವೆಂಬುದೊಂದು ದಂದೆಯಾಗಿಬಿಟ್ಟಿದೆ. ಇಂತಹುದೇ ಎಳೆಯನ್ನಿಟ್ಟುಕೊಂಡು ಬಾಲಿವುಡ್ ನಲ್ಲಿ ಹಿಂದಿ ಮೀಡಿಯಂ ಸಿನಿಮಾ ಯಶಸ್ಸು ಗಳಿಸಿತ್ತು. ಪೋಷಕರ ಪಾತ್ರದಲ್ಲಿ ಇರ್ಫಾನ್ ಖಾನ್ ಮತ್ತು ಖಾಮರ್ ಪ್ರೇಕ್ಷಕರ ಮನಗೆದ್ದಿದ್ದಲ್ಲದೇ, ಅವರಿಗೆ ಕನ್ನಡಿಯಾಗಿ ತೆರೆಯ ಮೇಲೆ ವಿಜೃಂಭಿಸಿದ್ದರು. ಅಂತಿಮವಾಗಿ ತಮ್ಮ ಮಗಳು ಪಿಯಾಳನ್ನು ಹಿಂದಿ ಮೀಡಿಯಂ ಸರ್ಕಾರಿ ಶಾಲೆಗೆ ಸೇರಿಸುವ ಪೋಷಕರ ನಿರ್ಧಾರ ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಕನ್ನಡಿ ಹಿಡಿದಂತಿತ್ತು.
ಹಿಂದಿ ಮೀಡಿಯಂ ಸಿನಿಮಾದ ಯಶಸ್ಸಿನಿಂದ ಪ್ರೇರಿತವಾಗಿ ಈಗ ಅಗ್ರೇಜಿ ಮೀಡಿಯಂ ಸಿನಿಮಾ ತಯಾರಾಗುತ್ತಿದೆ. ಇದರಲ್ಲೂ ಪ್ರಧಾನ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಇರ್ಫಾನ್ ಪತ್ನಿಯಾಗಿ ರಾಧಿಕಾ ಮದನ್ ಅಭಿನಯಿಸುತ್ತಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಕರೀನಾ ಕಪೂರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೇ. ಮೊದಲ ಬಾರಿಗೆ ಕಾಪ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕರೀನಾ ತಮ್ಮ ಪಾತ್ರದ ಬಗ್ಗೆ ಕಾತರರಾಗಿದ್ದಾರೆ. ನಿರ್ದೇಶಕ ಹೋಮಿ ಅದಾಜಾನಿಯಾ ಅವರ ಅಣತಿಯಂತೆ ಪಾತ್ರಕ್ಎಕ ಹೋಮ್ ವರ್ಕ್ ಮಾಡಿಕೊಂಡಿರುವ ಕರೀನಾ, ಮೇ 15ರಿಂದ ಅಗ್ನೇಜಿ ಮೀಡಿಯಂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ ನಲ್ಲಿ ಲಂಡನ್ ಗೆ ತೆರಳಲಿರುವ ಕರೀನಾ, ಅದಕ್ಕೂ ಮುನ್ನ ಚಿತ್ರೀಕರಣ ಮುಗಿಸಿಕೊಂಡು ಹೋಗಬೇಕೆಂದು ಡಿಸೈಡ್ ಮಾಡಿದ್ದಾರೆ.
Leave a Reply
You must be logged in to post a comment.