1983ರಲ್ಲಿ ರಿಲೀಸ್ ಆದ ಪಲ್ಲವಿ ಅನುಪಲ್ಲವಿ ಕನ್ನಡ ಸಿನಿಮಾ ಹೆಸರಾಂತ ನಟ ಹಾಗೂ ನಿರ್ದೇಶಕನ ಹುಟ್ಟಿಗೆ ಕಾರಣವಾಗಿತ್ತು. ಅನಿಲ್ ಕಪೂರ್ ಮತ್ತು ಮಣಿರತ್ನಂ ಅವರ ಚೊಚ್ಚಲ ಸಿನಿಮಾವದು. ಅದಾದಮೇಲೆ ಅನಿಲ್ ಕಪೂರ್ ಬಾಲಿವುಡ್ ನಲ್ಲಿ ಬೇಡಿಕೆಯ ನಟನಾಗಿ ಬೆಳೆದರೆ, ಮಣಿರತ್ನಂ ಭಾರತದ ಜನಮೆಚ್ಚಿದ ನಿರ್ದೇಶಕರಾಗಿ ಬೆಳೆದದ್ದು ಇತಿಹಾಸ. ಎರಡು ದಶಕಗಳ ಹಿಂದಿನ ವಿಚಾರ ಹೀಗ್ಯಾಕಪ್ಪ ಅಂತ ಯೋಚಿಸ್ತಿದ್ದೀರಾ..
ಇತ್ತೀಚಿಗೆ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅದನ್ನು ನೋಡಿದ ಅನಿಲ್ ಹಳೆ ನೆನಪನ್ನು ಹಂಚಿಕೊಳ್ಳುವ ಮೂಲಕ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
Some tweets bring back so many memories…of friends, colleagues, places, food enjoyed & experienced! You cannot help but feel blessed!
This one took me back to my shooting days of my first & only Kannada Film! #PallaviAnupallavi @NFAIOfficial https://t.co/rOmKo9OsuD— Anil Kapoor (@AnilKapoor) May 29, 2019
“ಕೆಲವು ಸಂಗತಿಗಳು, ನಮ್ಮ ಹಳೆಯ ದಿನಗಳನ್ನು ನೆನಪಿಸುತ್ತವೆ. ಸ್ನೇಹಿತರು, ಸಹೋದ್ಯೋಗಿಗಳು, ಭೇಟಿ ನೀಡಿದ ಜಾಗ, ಸವಿದ ಆಹಾರ ಎಲ್ಲವು ನೆನಪಾಗುತ್ತವೆ. ಇದನ್ನೆಲ್ಲ ಪಡೆಯಲು ನಾವು ಪುಣ್ಯ ಮಾಡಿದ್ದೇವು ಎಂದಕೊಳ್ಳಬೇಕಷ್ಟೆ. ನನ್ನ ಮೊದಲ ಮತ್ತು ಏಕೈಕ ಕನ್ನಡ ಸಿನಿಮಾ ಪಲ್ಲವಿ ಅನುಪಲ್ಲವಿ ಶೂಟಿಂಗ್ ದಿನಗಳು ಈಗ ನೆನಪಾಗುತ್ತಿವೆ” ಎಂದು ಅನಿಲ್ ಕಪೂರ್ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್ ಗೆ ನಾಯಕಿಯಾಗಿ ಲಕ್ಷ್ಮಿ ಕಾಣಿಸಿಕೊಂಡಿದ್ದರು. ಸಂಗೀತ ಮಾಂತ್ರಿಕ ಇಳೆಯರಾಜ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಎವರ್ ಗ್ರೀನ್ ಹಾಡುಗಳಾಗಿ ಜನಮೆಚ್ಚುಗೆ ಗಳಿಸಿದೆ.
No Comment! Be the first one.