ನೆನ್ನೆ ನಟ ಅನಿಲ್ ನೀನಾಸಂ ಅವರ್ ಅನಾರೋಗ್ಯ, ಆರ್ಥಿಕ ಸಮಸ್ಯೆಯ ಕುರಿತು ಸಿನಿಬಜ಼್ ನೆನ್ನೆ ವರದಿ ಮಾಡಿತ್ತು. ವರದಿ ಪ್ರಕಟಗೊಂಡ ಕೆಲವೇ ಹೊತ್ತಿನಲ್ಲಿ ದರ್ಶನ್ ಅನಿಲ್ ಕುಟುಂಬಕ್ಕೆ ಕರೆ ಮಾಡಿ ತಾನು ಆದಷ್ಟು ಬೇಗ ಬಂದು ಭೇಟಿ ಮಾಡುತ್ತೇನೆ. ಆತಂಕ ಪಡಬೇಡಿ ಅಂತಾ ಸಾಂತ್ವನ ಹೇಳಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲಿದ್ದ ದರ್ಶನ್ ಅದರ ಒತ್ತಡದ ಮಧ್ಯೆಯೂ ಅನಿಲ್ ಅವರನ್ನು ಸಂಪರ್ಕಿಸಿದ್ದಕ್ಕೆ ಸಿನಿಬಜ್ ಧನ್ಯವಾದ ಅರ್ಪಿಸುತ್ತದೆ…
ರಂಗಭೂಮಿಯಲ್ಲಿಯೇ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಅನಿಲ್ ಹಲವಾರು ವರ್ಷಗಳ ಕಾಲ ಅಲ್ಲಿಯೇ ತೊಡಗಿಸಿಕೊಂಡಿದ್ದವರು. ವ್ಯವಹಾರದಾಚೆಗೆ ಕಲೆಯನ್ನು ಪ್ರೀತಿಸೋ ಮನಸ್ಥಿತಿಯ ಅನಿಲ್ ಆರಂಭ ಕಾಲದಿಂದಲೂ ಹಣಕಾಸಿನ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡವರಲ್ಲ. ಇದ್ದುದರಲ್ಲಿಯೇ ಅಚ್ಚುಕಟ್ಟಾಗಿ ಬದುಕೋ ಜಾಯಮಾನದ ಅವರಿಗೆ ಈಗ ಬಂದೊದಗಿರುವ ಅನಾರೋಗ್ಯ ಅನಿರೀಕ್ಷಿತ ಆಘಾತ.
ಇತ್ತೀಚೆಗವರು ಕಿರುತೆರೆ ಧಾರಾವಾಹಿಗಳಲ್ಲಿಯೂ ಹೆಚ್ಚಾಗಿ ನಟಿಸುತ್ತಿದ್ದರು. ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಅವರು ಆರೋಗ್ಯದ ಬಗ್ಗೆಯೂ ಅಷ್ಟಾಗಿ ಗಮನ ಹರಿಸಿರಲಿಲ್ಲ. ಇದೀಗ ಅವರು ಹಾಸಿಗೆ ಹಿಡಿದಿದ್ದಾರೆ. ಸಿನಿಬಜ಼್ ವರದಿ ಪ್ರಕಟಿಸಿದ ಮೇಲೆ ಒಂದಷ್ಟು ಕಡೆಯಿಂದ ಸಹಾಯಹಸ್ತ ಚಾಚಿಕೊಳ್ಳುತ್ತಿದೆ. ಈಗ ದರ್ಶನ್ ಅವರೂ ಈ ಬಗ್ಗೆ ಗಮನ ಹರಿಸಿರೋದರಿಂದ ಅನಿಲ್ ಅನಾರೋಗ್ಯ ನೀಗಿಕೊಂಡು ಬರುವ ಭರವಸೆ ಚಿಗುರಿಕೊಂಡಿದೆ. ಅವರು ಆದಷ್ಟು ಬೇಗನೆ ಚೇತರಿಸಿಕೊಂಡು ಮತ್ತೆ ಮೊದಲಿನಂತಾಗಲೆಂಬುದು ನಮ್ಮ ಹಾರೈಕೆ.
No Comment! Be the first one.