ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಪಾಠಿ ಗೆಳೆಯ ಅನಿಲ್ ಅವರ ಅನಾರೋಗ್ಯದ ಬಗ್ಗೆ ಸಿನಿಬಜ್ ಸುದ್ದಿ ಮಾಡಿತ್ತು. ದರ್ಶನ್ ಸೇರಿದಂತೆ ನಾನಾ ದಿಕ್ಕಿನಿಂದ ಹರಿದು ಬಂದಿದ್ದ ನೆರವಿನಿಂದಾಗಿ ಅನಿಲ್ ಅವರಿಗೆ ಸರಾಗವಾಗಿಯೇ ಚಿಕಿತ್ಸೆಯೂ ನಡೆಯುತ್ತಿತ್ತು. ತುಸು ಚೇತರಿಕೆ ಕಂಡಿದ್ದ ಅನಿಲ್ ಮತ್ತೆ ಮೊದಲಿನಂತಾಗುತ್ತಾರೆಂಬ ನಂಬಿಕೆಯೂ ಮೊಳೆತುಕೊಂಡಿತ್ತು. ಆದರೀಗ ಪರಿಸ್ಥಿತಿ ಕೈ ಮೀರಿ ಅನಿಲ್ ಉಸಿರು ನಿಲ್ಲಿಸಿದ್ದಾರೆ.
ಅನಿಲ್ ಅನಾರೋಗ್ಯಕ್ಕೀಡಾಗಿ ದಾಖಲಾದ ಕ್ಷಣದಿಂದಲೂ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇದೀಗ ಅದೆಲ್ಲವನ್ನೂ ಮೀರಿ ಅನಿಲ್ ಅನಾರೋಗ್ಯ ಉಲ್ಬಣಿಸಿದೆ. ಇನ್ನು ಏನೂ ಮಾಡಲು ಸಾಧ್ಯವಿಲ್ಲ ಅಂತ ಕೈ ಚೆಲ್ಲಿರೋ ವೈದ್ಯರು ವೆಂಟಿಲೇಟರ್ ಅನ್ನೂ ತೆಗೆದಿದ್ದಾರೆ. ಆದರೂ ಕೂಡಾ ಅನಿಲ್ ತುಸುವೇ ಉಸಿರು ಹಿಡಿದುಕೊಂಡಿದ್ದರಂತೆ. ಆದರೀಗ ಅವರು ಮೃತಪಟ್ಟಿದ್ದಾರೆ.
ಇದೀಗ ಆಸ್ಪತ್ರೆಯಿಂದ ಅನಿಲ್ ಅವರ ಪಾರ್ಥೀವ ಶರೀರವನ್ನು ಹೆಬ್ಬಾಳದಲ್ಲಿರೋ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಕುಟುಂಬಿಕರು, ಸಾರ್ವಜನಿಕರ ದರ್ಶನಕ್ಕಿಟ್ಟು ನಂತರ ಅವರ ಊರಾದ ತಿಪಟೂರಿಗೆ ಕೊಂಡೊಯ್ಯಲಾಗುತ್ತದೆ.
ರಂಗಭೂಮಿ ಮತ್ತು ಕಿರುತೆರೆಯಲ್ಲಿ ಖ್ಯಾತರಾಗಿದ್ದ ಅನಿಲ್ ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದರು. ಆದರೆ ಸ್ನೇಹಮಯಿಯಾಗಿದ್ದ ಅನಿಲ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶಲನ್ ಸೇರಿದಂತೆ ಅನೇಕರು ಚಿಕಿತ್ಸೆಗೆ ಸಹಾಯವನ್ನೂ ಮಾಡಿದ್ದರು. ಆದರೀಗ ಇಂಥಾ ಸಹಾರ, ಹರಕೆ ಹಾರೈಕೆಗಳೆಲ್ಲವನ್ನು ಮೀರಿ ಸಾವು ಅನಿಲ್ ಅವರನ್ನು ಸೆಳೆದೊಯ್ದಿದೆ.
No Comment! Be the first one.