ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇಂತಹ ಸಾಕಷ್ಟು ಆರೋಪಗಳನ್ನು ಕನ್ನಡವೂ ಸೇರಿದಂತೆ ಎಲ್ಲ ನಟ ನಟಿಯರು ಎದುರಿಸುತ್ತಲೇ ಇದ್ದಾರೆ. ಅವ್ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ. ಇತ್ತೀಚಿಗೆ ಮಾಲಿವುಡ್ ನ ಪ್ರೆಟ್ಟಿ ಯುವ ನಟಿ ಅನು ಸಿತಾರ ಅನಗತ್ಯವಾಗಿ ಗರ್ಭಿಣಿ ಎಂಬ ಆರೋಪವನ್ನು ಕೇಳಿ ಅಸಹ್ಯ ಪಟ್ಟಿಕೊಳ್ಳುವಂತಾಗಿತ್ತಂತೆ.
ಅನು ಸಿತಾರ ಈ ಹಿಂದೆ ಬಾಲ್ಯ ಸ್ನೇಹಿತ ವಿಷ್ಣು ಪ್ರಸಾದ್ ಅವರನ್ನು 2015ರಲ್ಲಿ ಮದುವೆಯಾದರಂತೆ. ಆಗವರಿಗೆ ಕೇವಲ 22 ವರ್ಷ ವಯಸ್ಸು. ಅಲ್ಲದೇ ಸಾಂಸಾರಿಕ ಜೀವನವನ್ನು ಸದ್ಯಕ್ಕೆ ಬೇಡವೆಂದು ನಿರ್ಧರಿಸಿ ಪ್ಯೂಚರ್ ಗೆ ಪೋಸ್ಟ್ ಪನ್ ಮಾಡಿದ್ದರಂತೆ. ಆದರೆ ಆಕೆ ಗರ್ಭಿಣಿ ಎಂಬ ರೂಮರ್ ಆಕೆಗೆ ಸಹಿಸಲು ಅಸಾಧ್ಯವಾದ ಬೇಸರನ್ನು, ಕೋಪವನ್ನು ತಂದಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಅನು ಸಿತಾರ. ಮಲಯಾಳಂ ನ ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದ ಅನು ತಮಿಳಿನಲ್ಲಿ ತಮ್ಮ ಚೊಚ್ಚಲ ಸಿನಿಮಾ ಪೊದ್ದು ನಲನ್ ಕರುತಿ ಎಂಬ ಸಿನಿಮಾವನ್ನು ಸಂತೋಷ್ ಪ್ರತಾಪ್ ಮತ್ತು ಕರುಣ್ ಕರನ್ ಜತೆಗೆ ಅಭಿನಯಿಸಿದ್ದರು.
No Comment! Be the first one.