ಹರೀಶ್ ಬಂಗೇರಾ ನಿರ್ಮಾಣದ ಅನುಕ್ತ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಚಿತ್ರವೊಂದರ ಯಶಸ್ಸಿಗೆ ಏನೇನು ವಾತಾವರಣವಿರಬೇಕೋ ಅದೆಲ್ಲವಕ್ಕೂ ಕೂಡಾ ಅನುಕ್ತ ರೂವಾರಿಯಾಗಿದೆ. ಚಿತ್ರತಂಡದ ಕಡೆಯಿಂದ ಬರುವ ಸುದ್ದಿಗಳಿಗಿಂತಲೂ, ಪ್ರೇಕ್ಷಕರ ಮನಸಲ್ಲಿಯೇ ಹುಟ್ಟಿಕೊಳ್ಳೋ ಪ್ರಶ್ನೆಗಳೇ ಹೆಚ್ಚು ಪರಿಣಾಮಕಾರಿ. ಈ ದಿಸೆಯಲ್ಲಿ ನೋಡಿದರೆ, ಖಂಡಿತಾ ಅನುಕ್ತ ಯಶದ ಹಾದಿಯಲ್ಲಿದೆ!
ಅನುಕ್ತ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ ಎಂವಬ ವಿಚಾರ ಈಗಾಗಲೇ ಜಾಹೀರಾಗಿದೆ. ಆದರೆ ಈ ಸಿನಿಮಾದೊಳಗೆ ಮತ್ತೂ ಏನೇನಿರಬಹುದೆಂಬ ಪ್ರಶ್ನೆ ಮತ್ತು ನಾನಾ ದಿಕ್ಕುಗಳ ಚರ್ಚೆ ಸದಾ ಚಾಲ್ತಿಯಲ್ಲಿದೆ. ಇದೀಗ ಅನುಕ್ತದಲ್ಲಿ ಹಾರರ್ ಅನುಭವ ಕೂಡಾ ಆಗಲಿದೆಯಾ? ಈ ಚಿತ್ರದಲ್ಲಿಯೂ ತುಳುನಾಡ ಸೀಮೆಯ ಜನರ ನಡುವೆ ಹಾಸುಹೊಕ್ಕಾಗಿರುವ ಗುಡ್ಡದ ಭೂತ ಇದೆಯಾ ಅಂತೆಲ್ಲ ಪ್ರೇಕ್ಷಕರೇ ಕುತೂಹಲಗೊಂಡಿದ್ದಾರೆ. ಆದರೆ ಚಿತ್ರ ತಂಡ ಈ ಬಗೆಗಿನ ಯಾವ ಮಾಹಿತಿಯನ್ನೂ ಕೂಡಾ ಬಿಟ್ಟು ಕೊಟ್ಟಿಲ್ಲ. ಆದರೆ, ಜನ ನಿರೀಕ್ಷೆ ಮಾಡಿರೋದನ್ನು ಮೀರಿದ ವಿಚಾರಗಳು ಅನುಕ್ತದಲ್ಲಿರೋದಂತೂ ಸತ್ಯ!
ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಈ ಚಿತ್ರವನ್ನು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ ಮತ್ತು ಸಂಗೀತಾ ಭಟ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಅನುಪ್ರಭಾಕರ್, ಉಷಾ ಭಂಡಾರಿ, ಶ್ರೀಧರ್ ಮುಂತಾದವರ ತಾರಾಗಣವಿದೆ. ನೊಬಿನ್ ಪೌಲ್ ಮ್ಯೂಸಿಕ್ ಹಾಗೂ ಮನೋಹರ ಜೋಷಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
#
No Comment! Be the first one.