ಸ್ಯಾಂಡಲ್ವುಡ್ಗೆ ಹೊಸಾ ಪ್ರತಿಭೆಗಳ ಆಗಮನವಾಗುತ್ತಾ, ಹೊಸಾ ಅಲೆಯ ಚಿತ್ರಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಈಗ ಇಂಥಾ ಪ್ರತಿಭಾನ್ವಿತರೇ ಸೇರಿ ರೂಪಿಸಿರೋ ಅನುಕ್ತ ತೆರೆಗಾಣಲು ರೆಡಿಯಾಗಿದೆ. ಈ ಸಿನಿಮಾ ಮೂಲಕ ಕಿರುತೆರೆಯಲ್ಲಿ ಗುರುತಿಸಿಒಕೊಂಡ ಇದ್ದ ಕಾರ್ತಿಕ್ ಅತ್ತಾವರ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಇವರಿಗೆ ಜೋಡಿಯಾಗಿ ಸಂಗೀತಾ ಭಟ್ ಅಭಿನಯಿಸಿದ್ದಾರೆ.
ಅನುಕ್ತ ಕ್ರೈಂ ಥಗರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಇದನ್ನು ಮಂಗಳೂರು ಮೂಲದ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿದ್ದಾರೆ. ಕರಾವಳಿ ಮೂಲದವರಾದ ಹರೀಶ್ ಬಂಗೇರ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಹೊಸಾ ತಂಡವೊಂದು ಅನುಕ್ತ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದವೂರಿದೆ. ಅನುಕ್ತ ಸಿನಿಮಾ ಮೂಲಕವೇ ಕಾಲೂರಿ ನಿಲ್ಲುವ, ಮತ್ತಷ್ಟು ಚಿತ್ರಗಳನ್ನು ತಯಾರು ಮಾಡುವ ಉತ್ಸಾಹದಿಂದಿದೆ.
ಈ ಸಿನಿಮಾದ್ದು ವಿಶಿಷ್ಟವಾದ ಜಾಡು. ತುಳುನಾಡಿನ ಸಂಸ್ಕೃತಿಯ ಭಾಗವಾದ ಭೂತ ಕೋಲ ಸೇರಿದಂತೆ ಎಲ್ಲವೂ ಇಲ್ಲಿದೆ. ಅದನ್ನೆಲ್ಲ ಕ್ರೈಂ ಥ್ರಿಲ್ಲರ್ ಕಥಾನಕಕ್ಕೆ ಬ್ಲೆಂಡ್ ಮಾಡಲಾಗಿದೆಯಂತೆ. ಆದ್ದರಿಂದಲೇ ಇಡೀ ಚಿತ್ರೀಕರಣ ಕರಾವಳಿ ಭಾಗದಲ್ಲಿಯೇ ನಡೆದಿದೆ. ಇದೆಲ್ಲದರ ನಡುವೆಯೇ ಕನಸಿಗೆ ಅರ್ಥವನ್ನೂ ಹುಡುಕ ಹೊರಟಿರೋ ಅನುಕ್ತ ಇಪ್ಪತ್ತೆಂಟು ದಿನಗಳಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ.
ಹೀಗೆ ವೇಗವಾಗಿ ಚಿತ್ರೀಕರಣ ಮುಗಿಸಿಕೊಳ್ಳೋದಕ್ಕೆ ಕಾರಣ ಪ್ಲಾನಿಂಗ್. ಕೇವಲ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಸಮಾಪ್ತಿ ಮಾಡಿಕೊಂಡಿದ್ದರ ಹಿಂದೆ ಎಂಟು ತಿಂಗಳ ಶ್ರಮವಿದೆಯಂತೆ. ತುಳುನಾಡಿನ ಸಂಸ್ಕ್ರತಿ ಅಂದರೆ ಮೊಗೆದಷ್ಟೂ ಮುಗಿಯದ ಅಕ್ಷಯ ಪಾತ್ರೆಯಂಥಾದ್ದು. ಈ ಬಗ್ಗೆ ಪ್ರೇಕ್ಷಕರ ಕೌತುಕ ತಣಿಯುವುದೇ ಇಲ್ಲ. ಅಂಥಾದ್ದರಲ್ಲಿ ಅದನ್ನೇ ಜೀವಾಳವಾಗಿಸಿಕೊಂಡಿರೋ ಅನುಕ್ತ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಬೇರೆ ಭಾಷೆಗಳಿಗೂ ರೀಮೇಕ್ಗಾಗಿ ಬಹು ಬೇಡಿಕೆ ಹೊಂದಿರುವ ಅನುಕ್ತ ಬಿಡುಗಡೆಗೆ ಸಜ್ಜುಗೊಂಡಿದೆ. #
No Comment! Be the first one.