ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಅನುಕ್ತ ರಾಜ್ಯಾಧ್ಯಂತ ಸುದ್ದಿಯಲ್ಲಿದೆಲ್ಲಿದನ್ನು ಮತ್ತಷ್ಟು ತೀವ್ರಗೊಳಿಸುವಂತೆ ಅನುಕ್ತಾದ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಇದಕ್ಕೆ ಸಿಕ್ಕ ವೀಕ್ಷಣೆ, ಬಂದಿರೋ ಮೆಚ್ಚುಗೆಗಳೇ ಅಚ್ಚರಿದಾಯಕವಾಗಿದ್ದವು. ಈಗಂತೂ ಈ ಟ್ರೈಲರ್ ಟ್ರೆಂಡಿಂಗ್ನಲ್ಲಿದೆ. ಈ ಮೂಲಕವೇ ಅನುಕ್ತ ಪ್ರೇಕ್ಷಕರನ್ನೆಲ್ಲ ಸಾರಾಸಗಟಾಗಿ ತನ್ನತ್ತ ಸೆಳೆದುಕೊಂಡಿದೆ.
ಪಿಆರ್ಕೆ ಆಡಿಯೋ ಸಂಸ್ಥೆಯ ಕಡೆಯಿಂದ ರಿಲೀಸ್ ಆಗಿರೋ ಈ ಟ್ರೈಲರ್ ಎಂಥವರನ್ನೂ ಸೆಳೆದುಕೊಳ್ಳುವಂತಿದೆ. ಒಂದು ಕೊಲೆಯ ಸುತ್ತಲಿನ ಕಥೆಯ ಸುಳಿವು ನೀಡುವಂತಿರೋ ಈ ಟ್ರೈಲರ್ಗೆ ಜನ ಮಾರು ಹೋಗಿದ್ದಾರೆ. ಇದು ರಂಗಿತರಂಗದಂಥಾದ್ದೇ ಗೆಲುವು ದಾಖಲಿಸುತ್ತೆ ಎಂಬಂಥಾ ಮಾತುಗಳೂ ಕೇಳಿ ಬಸಿದೆ.
ಹೀಗೆ ಟ್ರೈಲರ್ ಮೂಲಕ ಟ್ರೆಂಡಿಂಗ್ನಲ್ಲಿರೋ ಅನುಕ್ತ ಕ್ರೈಂ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಇದನ್ನು ಮಂಗಳೂರು ಮೂಲದ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿದ್ದಾರೆ. ಕರಾವಳಿ ಮೂಲದವರಾದ ಹರೀಶ್ ಬಂಗೇರ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಹೊಸಾ ತಂಡವೊಂದು ಅನುಕ್ತ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದವೂರಿದೆ. ಅನುಕ್ತ ಸಿನಿಮಾ ಮೂಲಕವೇ ಕಾಲೂರಿ ನಿಲ್ಲುವ, ಮತ್ತಷ್ಟು ಚಿತ್ರಗಳನ್ನು ತಯಾರು ಮಾಡುವ ಉತ್ಸಾಹದಿಂದಿದೆ.
ಈ ಸಿನಿಮಾದ್ದು ವಿಶಿಷ್ಟವಾದ ಜಾಡು. ತುಳುನಾಡಿನ ಸಂಸ್ಕೃತಿಯ ಭಾಗವಾದ ಭೂತ ಕೋಲ ಸೇರಿದಂತೆ ಎಲ್ಲವೂ ಇಲ್ಲಿದೆ. ಅದನ್ನೆಲ್ಲ ಕ್ರೈಂ ಥ್ರಿಲ್ಲರ್ ಕಥಾನಕಕ್ಕೆ ಬ್ಲೆಂಡ್ ಮಾಡಲಾಗಿದೆಯಂತೆ. ಆದ್ದರಿಂದಲೇ ಇಡೀ ಚಿತ್ರೀಕರಣ ಕರಾವಳಿ ಭಾಗದಲ್ಲಿಯೇ ನಡೆದಿದೆ. ಇದೆಲ್ಲದರ ನಡುವೆಯೇ ಕನಸಿಗೆ ಅರ್ಥವನ್ನೂ ಹುಡುಕ ಹೊರಟಿರೋ ಅನುಕ್ತ ಇಪ್ಪತ್ತೆಂಟು ದಿನಗಳಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ. ಟ್ರೈಲರ್ಗೆ ಸಿಕ್ಕ ಭರಪೂರ ಸ್ವಾಗತದ ಬಿಸಿಯಲ್ಲಿಯೇ ಬೇಗನೆ ತೆರೆಗಾಣಲು ಅನುಕ್ತ ಸಜ್ಜಾಗುತ್ತಿದೆ.
https://www.youtube.com/watch?v=4RksJ7IAcVY&feature=youtu.be #