ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕವೇ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದವರು ಅನುಪಮಾ ಪರಮೇಶ್ವರನ್. ಈಕೆಯ ಮುದ್ದು ಮುದ್ದಾದ ನಟನೆಗೆ ಕನ್ನಡದ ಪ್ರೇಕ್ಷಕರು ಮನಸೋತಿದ್ದಾರೆ. ಈ ಚಿತ್ರವೂ ಒಂದು ಮಟ್ಟಕ್ಕೆ ಗೆಲುವು ದಾಖಲಿಸಿದೆ. ಇದೇ ಹೊತ್ತಿನಲ್ಲಿ ಮತ್ತೊಂದು ಚಿತ್ರದ ಮೂಲಕ ಅನುಪಮಾ ಆಗಮಿಸೋ ಸುದ್ದಿಗಳು ಹರಿದಾಡಲಾರಂಭಿಸಿವೆ!
ಪವನ್ ಒಡೆಯರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರ ಗೂಗ್ಲಿ. ರಾಕಿಂಗ್ ಸ್ಟಾರ್ ಯಶ್ ಮತ್ತು ಕೃತಿ ಕರಬಂಧ ಈ ಸಿನಿಮಾದಲ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದರು. ಇದೀಗ ಗೂಗ್ಲಿ-೨ ಅನ್ನೋ ಚಿತ್ರಕ್ಕೆ ತಯಾರಿ ಆರಂಭವಾಗಿದೆ. ಆದರೆ ಇದರಲ್ಲಿ ಖಂಡಿತಾ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿಲ್ಲ. ಪವನ್ ಒಡೆಯರ್ ನಿರ್ದೇಶನವನ್ನೂ ಮಾಡುತ್ತಿಲ್ಲ! ಪವನ್ ಒಡೆಯರ್ ಗರಡಿಯಲ್ಲಿ ಕೆಲಸ ಮಾಡಿದ್ದ ರಾಜ್ ಗುರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಾನು ಮತ್ತು ವರಲಕ್ಷ್ಮಿ ಖ್ಯಾತಿಯ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ನಾಯಕಿ ಯಾರೆಂಬುದು ಮಾತ್ರ ನಿಕ್ಕಿಯಾಗಿರಲಿಲ್ಲ. ಆ ಪಾತ್ರಕ್ಕೆ ಅನುಪಮಾ ಪರಮೇಶ್ವರನ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ನಿರ್ದೇಶಕರು ಬಂದಿದ್ದಾರಂತೆ.
ಈಗಾಗಲೇ ಅನುಪಮಾ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ. ಕನ್ನಡ ಸಿನಿಮಾ ಮತ್ತು ಪ್ರೇಕ್ಷಕರ ಬಗ್ಗೆ ಅಪಾರ ಅಭಿಮಾನ ಹೊಂದಿರೋ ಅನುಪಮಾ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಯೇ ಬಂದಿದೆಯಂತೆ. ಇನ್ನೇಲನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಸುದ್ದಿ ಹೊರ ಬೀಳಲಿದೆ.
No Comment! Be the first one.