ಬಹುಭಾಷಾ ತಾರೆಗಳೆಂದರೆ ಸಿನಿ ರಸಿಕರಿಗೆ ಎಲ್ಲಿಲ್ಲದ ಮಮತೆ. ಅದರಲ್ಲೂ ಎಲ್ಲ ಭಾಷೆಗಳಲ್ಲೂ ನಟಿಯರೇನಾದರೂ ಅಭಿನಯಿಸಿದ್ದೇ ಆದರೆ ವಾಟ್ಸ್ ಅಪ್ ಡಿಪಿಯಿಂದ ಹಿಡಿದು, ಫೇಸ್ ಬುಕ್, ಇನ್ ಸ್ಟಾ, ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡುವುದಲ್ಲದೇ ಫ್ರೊಫೈಲ್ ಫೋಟೋವಾಗಿಯೂ ಸೇವ್ ಮಾಡಿಕೊಂಡುಬಿಡುತ್ತಾರೆ. ಸದ್ಯ ಕಾಲಿವುಡ್, ಟಾಲಿವುಡ್ ಸಿನಿ ರಸಿಕರ್ ಹಾರ್ಟ್ ಫೇವರ್ ಅನುಷ್ಕಾ ಶೆಟ್ಟಿ ಎಂದರೆ ಒಂದು ಕೈ ಹೆಚ್ಚೆ ಎಲ್ಲರೂ ಇಷ್ಟಪಡುತ್ತಾರೆ. ಸಿನಿಮಾ ಆಯ್ಕೆಯಲ್ಲಿ ಆಕೆ ಚ್ಯೂಸಿ ಹಾಗೂ ವುಮೆನ್ ಓರಿಯೆಂಟೆಡ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವುದೇ ಪ್ರಮುಖ ಕಾರಣವಾಗಿದೆ.
ಈಗಾಗಲೇ ಅರುಂಧತಿ, ದೇವಸೇನಾ, ಭಾಗಮತಿ ರೀತಿಯ ಅದ್ಬುತ ಪಾತ್ರಗಳಿಗೆ ಜೀವತುಂಬಿ ಸಿನಿ ಪ್ರೇಮಿಗಳ ಮನ ಗೆದ್ದಿದ್ದಾರೆ ಕೂಡ. ಕೆಲ ವರ್ಷಗಳಿಮದ ತೂಕ ಹೆಚ್ಚಾಗಿ ಕೊಂಚ ಹಿನ್ನಡೆಯನ್ನು ಅನುಭವಿಸಿದ್ದ ಅರುಂಧತಿ, ಮತ್ತೆ ಸ್ಲಿಮ್ ಆಗಿ ಕಂಬ್ಯಾಕ್ ಆಗುತ್ತಿರೋದು ಎಲ್ಲರಿಗೂ ತಿಳಿದೇ ಇದೆ. ಆದರೆ ವಿಶೇಷವೆಂದರೆ ಕಿರು ತೆರೆಯಲ್ಲೂ ನಿರೂಪಕಿಯಾಗಿ ಅಭಿಮಾನಿಗಳನ್ನು ರಂಜಿಸೋಕೆ ಅನುಷ್ಕಾ ರೆಡಿಯಾಗುತ್ತಿದ್ದಾರೆ. ಹೌದು ಹಾಲಿವುಡ್ ನಿಂದ ಕಾಲಿವುಡ್ ನ ವರೆಗೂ ಸೂಪರ್ ಸಕ್ಸಸ್ ಕಂಡಿರುವ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಹೋಸ್ಟ್ ಆಗಲಿದ್ದಾರೆ ದೇವಸೇನಾ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪದ್ ಹಲವು ವರ್ಷಗಳಿಂದ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಜ್ಯೂನಿಯರ್ ಎನ್ ಟಿ ಆರ್ ಬಿಗ್ ಬಾಸ್ ಫಸ್ಟ್ ಸೀಸನ್ ಹಾಗೂ ನಾನಿ ಸೆಕೆಂಡ್ ಸೀಜನ್ ನ್ನು ನಡೆಸಿಕೊಟ್ಟು ಸಕ್ಸಸ್ ಕಂಡಿದ್ದರು. ಇದೀಗ ಮೂರನೇ ಸೀಜನ್ ಗೆ ತಯಾರಿ ಶುರುವಾಗಿದ್ದು, ಇದರ ಹೋಸ್ಟ್ ಆಗಿ ಅನುಷ್ಕಾ ಶೆಟ್ಟಿಯನ್ನು ಕರೆ ತರುವ ಪ್ರಯತ್ನ ಶುರುವಾಗಿದೆಯಂತೆ. ಈ ವಿವಾದಾತ್ಮಕ ರಿಯಾಲಿಟಿ ಶೋವನ್ನು ಮೊಟ್ಟ ಮೊದಲ ಬಾರಿಗೆ ಮಹಿಳೆ ನಡೆಸಿಕೊಟ್ಟದ್ದೇ ಆದರೆ ಹೊಸ ಟ್ರೆಂಡ್ ಶುರುವಾಗೋದು ಗ್ಯಾರಂಟಿ. ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಇಂತಹ ಪ್ರಯತ್ನವಾಗುವ ಸಾಧ್ಯತೆಯೂ ಇದೆ. ಈ ವಿಚಾರವಾಗಿ ಅನುಷ್ಕಾ ಶೆಟ್ಟಿ ಜೊತೆಗೂ ಚರ್ಚಿಸಲಾಗಿದ್ದು, ಆಕೆಯೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ ಅಕಸ್ಮಾತ್ ಮನಸ್ಸು ಬದಲಿಸಿದ್ದೇ ಆದರೆ ಆ ಅವಕಾಶ ನಟ ವಿಕ್ಟರಿ ವೆಂಕಟೇಶ್ ಪಾಲಾಗಬಹುದೆಂದು ಹೇಳಲಾಗುತ್ತಿದೆ. ನೋಡಬೇಕು.
No Comment! Be the first one.