ಅನುಷ್ಕ ಶರ್ಮ ಈಗೀಗ ಸಿನಿಮಾಗಳಲ್ಲಿ ಹೆಚ್ಚೆಚ್ಚು ಕಾಣಿಸುವುದನ್ನೇ ನಿಲ್ಲಿಸಿದ್ದಾರೆ. ಶಾರುಖ್ ಅಭಿನಯದ ಜೀರೋ ಸಿನಿಮಾದಲ್ಲಿ ನಟಿಸಿದ್ದ ಅನುಷ್ಕಾ ಅದಾದ ಮೇಲೆ ಯಾವ ಹೊಸ ಪ್ರಾಜೆಕ್ಟನ್ನು ಒಪ್ಪಿಕೊಂಡಿಲ್ಲ. ಬಹುಶಃ ಸಿನಿ ಜಗತ್ತಿನಿಂದ ಅನುಷ್ಕಾ ಜೋರಾಗಿ ಪೂರ್ಣ ಪ್ರಮಾಣದ ಗೃಹಿಣಿಯಾಗುವ ತಗಾದೆಯಲ್ಲಿದ್ದಾರೆ ಎನ್ನುತ್ತಿವೆ ಮೂಲಗಳು.
ಈ ಹಿಂದೆ ನಟಿಸಿದ್ದ ಜೀರೋ ಸಿನಿಮಾ ಅಷ್ಟೇನೂ ಯಶಸ್ಸನ್ನು ಕಾಣಲಿಲ್ಲ. ಆ ಡಿಪ್ರೆಷನ್ನಿನಲ್ಲಿಯೂ ಅನುಷ್ಕಾ ಇದ್ದಾರೆ ಎನ್ನಲಾಗುತ್ತದೆ. ಅದಲ್ಲದೇ ಸದ್ಯ ಅನುಷ್ಕಾ ಗರ್ಭಿಣಿಯಾಗಿದ್ದಾರೆ ಎಂದು ಕೂಡ ಮಾತನಾಡಿಕೊಳ್ಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅನುಷ್ಕಾ ನಾನು ನಟಿಯಾಗಿ ಏನು ಮಾಡಬೇಕಿತ್ತು ಮಾಡಿದ್ದೇನೆ. ಸದ್ಯ ಫ್ಯಾಮಿಲಿ ಎಂಜಾಯ್ ಮೆಂಟ್ ನಲ್ಲಿದ್ದೇನೆ. ಅಲ್ಲದೇ ಇನ್ನಿತ್ತರ ಹಲವು ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ಈ ಕಾರಣಕ್ಕಾಗಿ ಸಿನಿಮಾ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
No Comment! Be the first one.