ರಾಜಕುಮಾರ ಚಿತ್ರದ ಬ್ಲಾಕ್ ಬಸ್ಟರ್ ಹಿಟ್ನ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬರ್ತಿರೋ ಸೆನ್ಸೇಷನ್ ಸಿನಿಮಾ ಯುವರತ್ನ. ಈಗಾಗಲೇ ನಾನಾ ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಯುವರತ್ನ ಸಿನಿಮಾದಲ್ಲಿ ಪವರ್ ಸ್ಟಾರ್ ದಶಕಗಳ ನಂತರ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿರುವುದು ಚಿತ್ರದ ಹೈಲೈಟ್. ಇದೇ ಕಾರಣಕ್ಕೆ ಅಪ್ಪು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಪಾತ್ರಕ್ಕಾಗಿ ಮತ್ತಷ್ಟು ಫಿಟ್ ಆಗುವ ಸಲುವಾಗಿ ಪುನೀತ್ ರಾಜ್ ಕುಮಾರ್ ಜಿಮ್ ನಲ್ಲಿ ವರ್ಕೌಟ್ ಹೆಚ್ಚಿಸಿದ್ದಾರೆ. ದಿನವೂ ಗಂಟೆಗಟ್ಟಲೇ ಜಿಮ್ ನಲ್ಲಿ ಕಾಲ ಕಳೆಯುತ್ತಿರುವ ಅಪ್ಪು ವರ್ಕೌಟ್ ವಿಡಿಯೋ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಇತ್ತೀಚಿಗಷ್ಟೇ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರತ್ನನ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಕಾಲೇಜು ಹುಡುಗನಂತೆ ಸ್ಟೈಲಿಶ್ ಆಗಿ ಗಾಗಲ್ಸ್ ಹಾಕಿ ಬೈಕ್ ಓಡಿಸ್ತಾ ಬರ್ತಿರೋ ಅಪ್ಪು ಲುಕ್ ಕಂಡು ಅಭಿಮಾನಿಗಳು ಬಹಳ ಎಕ್ಸೈಟ್ ಕೂಡ ಆಗಿದ್ರೂ. ಪವರ್ ಸ್ಟಾರ್ ಲಾಂಚಿಂಗ್ ಸಿನಿಮಾಗಳಾದ ಅಪ್ಪು, ಅಭಿ ಚಿತ್ರಗಳಲ್ಲಿ ಕಾಲೇಜು ಹುಡುಗನಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಬರೋಬ್ಬರಿ 16 ವರ್ಷಗಳ ನಂತರ ಮತ್ತೆ ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ 3ನೇ ಹಂತದ ಶೂಟಿಂಗ್ ನಡೆಯುತ್ತಿದೆ.
No Comment! Be the first one.