ʻಅಪ್ಪು @ 46ʼ ಪುನೀತ್ ರಾಜ್ ಕುಮಾರ್ ಅವರ ಒಟ್ಟು ವ್ಯಕ್ತಿತ್ವವನ್ನು ವರ್ಣಿಸುವ ಸಾಲುಗಳನ್ನು ಹೊಂದಿದೆ. ಅಪ್ಪು ಅವರ ಗುಣವಿಶೇಷಣಗಳೆಲ್ಲಾ ಈ ಹಾಡಿನಲ್ಲಿ ಅಡಕವಾಗಿವೆ.
ಸಿನಿಮಾ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ವರುಣ್ ಕುಮಾರ್ ಗೌಡ ಅಂದರೆ ಬಲು ಫೇಮಸ್ಸು. ಟೀವಿ ಮೀಡಿಯಾದ ಮನರಂಜನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಲೇ ಸಿನಿಮಾರಂಗದ ವಲಯದಲ್ಲೂ ಅಪಾರ ಸ್ನೇಹ ಸಂಪಾದಿಸಿದ್ದಾರೆ. ಹಲವಾರು ರಿಯಾಲಿಟಿ ಶೋಗಳು, ಧಾರಾವಾಹಿಗಳು ಮತ್ತಿತರ ವಿಶೇಷ ಕಾರ್ಯಕ್ರಮಗಳು ಯಶಸ್ವಿಯಾಗಿ ರೂಪುಗೊಂಡಿದ್ದರ ಹಿಂದೆ ವರುಣ್ ಅವರ ನೆರಳಿದೆ.
ಸದ್ಯ ತಮ್ಮದೇ ವರುಣ್ ಸ್ಟುಡಿಯೋಸ್ ಯೂ ಟ್ಯೂಬ್ ಚಾನೆಲ್ಲನ್ನೂ ಆರಂಭಿಸಿ ಅದ್ಭುತ ಗುಣಮಟ್ಟದ ಕಂಟೆಂಟ್ ನೀಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ʻʻಲಕ್ ಲಕ್ ಲಕ್ ಲಕ್ ಲಕ್ ಪತಿ ಕರುನಾಡಿಗೆ ಇವರೇ ಅಧಿಪತಿʼ ಎನ್ನುವ ಹಾಡು ಆನ್ ಲೈನಿನಲ್ಲಿ ಸಖತ್ ಫೇಮಸ್ಸಾಗಿತ್ತಲ್ಲ? ಅದೂ ಸೇರಿದಂತೆ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ರಿಲೀಸಾದ, ಕನ್ನಡದ ಸಾಕಷ್ಟು ಜನ ಸ್ಟಾರ್ ಗಳು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ʻನಮ್ಮ ಭಾರತʼ ಮುಂತಾದ ವಿಡಿಯೋ ಆಲ್ಬಂಗಳು ಹೊರಬಂದಿದ್ದು ಇದೇ ವರುಣ್ ಸ್ಟುಡಿಯೋಸ್ ನಲ್ಲೇ…
ನಾಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದೆಯಲ್ಲಾ? ಈ ಸಂದರ್ಭದಲ್ಲಿ ಅವರಿಗೆ ಒಂದೊಳ್ಳೆ ಉಡುಗೊರೆ ನೀಡುತ್ತಿದ್ದಾರೆ. ಅದು ʻಅಪ್ಪು @ 46ʼ. ಈ ಹಾಡನ್ನು ಇಂದು ಸಂಜೆ 5.30ಕ್ಕೆ ಧ್ರುವ ಸರ್ಜಾ ಅನಾವರಣಗೊಳಿಸುತ್ತಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜಿಸಿ, ಭಜರಂಜಿ ಮೋಹನ್ ಬರೆದಿರುವ ಈ ಹಾಡನ್ನು ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ.
ʻಅಪ್ಪು @ 46ʼ ಪುನೀತ್ ರಾಜ್ ಕುಮಾರ್ ಅವರ ಒಟ್ಟು ವ್ಯಕ್ತಿತ್ವವನ್ನು ವರ್ಣಿಸುವ ಸಾಲುಗಳನ್ನು ಹೊಂದಿದೆ. ಅಪ್ಪು ಅವರ ಗುಣವಿಶೇಷಣಗಳೆಲ್ಲಾ ಈ ಹಾಡಿನಲ್ಲಿ ಅಡಕವಾಗಿವೆ. ಇದು ಪುನೀತ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೆ, ಯಾವುದೇ ಕಾಲ, ಸಂದರ್ಭದಲ್ಲೂ ಅವರ ಅಭಿಮಾನಿಗಳ ಪಾಲಿನ ಹೃದಯ ಗೀತೆಯಾಗಿ ನಿಲ್ಲಲಿದೆ…
ಚಿತ್ರರಂಗ ಮತ್ತು ಮೀಡಿಯಾ ವ್ಯಾಪ್ತಿಯಲ್ಲಿ ಯಾವುದೇ ಒಂದು ಬಣಕ್ಕೆ ಸೀಮಿತವಾಗದೆ ಎಲ್ಲರೊಂದಿಗೆ ಸ್ನೇಹ, ವಿಶ್ವಾಸ ಕಾಯ್ದುಕೊಂಡು ಬಂದಿರುವ ವರುಣ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ತುಸು ಹಚ್ಚೇ ಬಾಂಧವ್ಯ ಹೊಂದಿದ್ದಾರೆ. ಅಪ್ಪು ಅವರ ಫ್ಯಾಮಿಲಿಯಲ್ಲಿ ವರುಣ್ ಕೂಡಾ ಒಬ್ಬ ಸದಸ್ಯರಂತೆ ಗುರುತಿಸಿಕೊಂಡಿದ್ದಾರೆ. ʻಅಪ್ಪು @ 46ʼ ವರುಣ್ ಮತ್ತು ಪುನೀತ್ ಅವರ ಸ್ನೇಹದ ಸಂಕೇತವಾಗಿ ಇಂದು ಲೋಕಾರ್ಪಣೆಗೊಳ್ಳುತ್ತಿದೆ.
No Comment! Be the first one.