ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಪಕ್ಕಾ ಕಾಮಿಡಿ ಟ್ರ್ಯಾಕಿನ ಸಿನಿಮಾಕ್ಕೆ ರಡಿಯಾಗಿದ್ದಾರೆ. ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಟಿವಿ ಶೋಗಳನ್ನು ಮಾಡಿರೋ ರಾಜ್ ಹಾಗೂ ದಾಮಿನಿ ಎಂಬವರು ಸೇರಿಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಚಿತ್ರದ ಮೂಲಕ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ!
ಪೂರ್ತಿಯಾಗಿ ಕಾಮಿಡಿ ಮಯವಾಗಿರೋ ಈ ಚಿತ್ರಕ್ಕೆ ವೇರ್ ಈಸ್ ಮೈ ಕನ್ನಡಕ ಅಂತ ಹೆಸರಿಡಲಾಗಿದೆ. ಇದರಲ್ಲಿ ಗಣೇಶ್ ಜೊತೆಗೆ ಅರ್ಬಾಜ್ ಖಾನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಮೊದಲ ಸಲ ಇವರಿಬ್ಬರೂ ಸೇರಿಕೊಂಡು ನಗಿಸಲು ಮುಂದಾಗಿದ್ದಾರೆ.
ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಅರ್ಬಾಜ್ ಖಾನ್ ಪಾಲಿಗೆ ಕನ್ನಡ ಚಿತ್ರರಂಗ ಹೊಸತು. ಆದರೆ ಕನ್ನಡದಲ್ಲಿಯೂ ನಟಿಸಬೇಕೆಂಬ ಆಸೆ ಹೊಂದಿದ್ದರಂತೆ. ಅದಕ್ಕೆ ಸರಿಯಾಗಿ ವೇರ್ ಈಸ್ ಮೈ ಕನ್ನಡಕ ಚಿತ್ರದ ಸ್ಕ್ರಿಫ್ಟ್ ಮತ್ತು ಕಥೆ ಅವರಿಗೆ ತುಂಬಾ ಹಿಡಿಸಿ ಒಪ್ಪಿಕೊಂಡಿದ್ದಾರಂತೆ. ಇದೇ ತಿಂಗಳ ಏಳನೇ ತಾರೀಕಿನಂದು ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಆ ಬಳಿಕ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣವೂ ಶುರುವಾಗಲಿದೆ. ಸದ್ಯಕ್ಕೆ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆಯಲ್ಲಿ ನಿರ್ದೇಶಕರು ತೊಡಗಿಕೊಂಡಿದ್ದಾರೆ.
#
No Comment! Be the first one.