ಮನುಷ್ಯ ಸಹಜ ಸ್ವಭಾವಗಳಾದ ಪ್ರೀತಿ, ಕಾಮ, ಕೋಪ, ದುರಾಸೆ, ಅಸೂಯೆ, ತಪ್ಪುಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ಚಿತ್ರ ಅರಿಷಡ್ವರ್ಗ. ರಂಗಕರ್ಮಿ ಅರವಿಂದ್ ಕಾಮತ್ರ ಪ್ರಥಮ ನಿರ್ದೇಶನದ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಟ್ರೇಲರ್ ನೋಡಿದ ಯಾರಿಗೇ ಆದರೂ ʻಈ ಚಿತ್ರದಲ್ಲಿ ಏನೋ ಇದೆʼ ಎಂದು ಅನ್ನಿಸದೇ ಇರಲಾರದು. ಪಕ್ಕಾ ಥ್ರಿಲ್ಲರ್ ಜಾನರಿನ ಈ ಸಿನಿಮಾ ಟ್ರೇಲರಿನ ಮೂಲಕವೇ ಮೊದಲ ಹಂತದ ಗೆಲುವು ದಾಖಲಿಸಿದೆ!
ಅರಿಷಡ್ವರ್ಗ ಒಂದು ಮಿಸ್ಟರಿ, ಥ್ರಿಲ್ಲರ್ ಚಿತ್ರವಾಗಿದ್ದು, ಕೊಲೆಯೊಂದರ ಸುತ್ತ ನಡೆಯುವ ಕುತೂಹಲಕರ ಕಥಾನಕ ಇದರಲ್ಲಿದೆ. ಚಿತ್ರದ ಆರಂಭದಲ್ಲಿಯೇ ಉದ್ಯಮಿ ಹಾಗೂ ನಿರ್ಮಾಪಕನೊಬ್ಬನ ಹತ್ಯೆ ಆತನ ಮನೆಯಲ್ಲೇ ನಡೆಯುತ್ತದೆ. ಆ ಕೊಲೆ ಮಾಡಿದವರು ಯಾರು, ಯಾವ ಕಾರಣಕ್ಕಾಗಿ ಕೊಲೆ ನಡೆಯಿತು ಎಂಬುದನ್ನು ತನಿಖೆ ಮಾಡುತ್ತ ಹೊರಟ ಪೊಲೀಸರಿಗೆ ಹಲವು ಆಯಾಮಗಳು ಎದುರಾಗುತ್ತವೆ. ಚಿತ್ರನಟನೊಬ್ಬ ಯಾವುದೋ ಕೆಲಸಕ್ಕಾಗಿ ಆ ಮನೆಗೆ ಬಂದವನು ಆಶ್ಚರ್ಯಕರವಾಗಿ ಕೊಲೆ ಕೇಸ್ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನ ಜೊತೆ ಸಿನಿಮಾಹುಚ್ಚು ಹಿಡಿಸಿಕೊಂಡ ಒಬ್ಬ ಹುಡುಗಿ, ಅದೇಮನೆಗೆ ಕಳ್ಳತನ ಮಾಡಲು ಬಂದ ಕಳ್ಳನೂ ಅಲ್ಲಿ ಸೇರಿಕೊಳ್ಳುತ್ತಾನೆ.
ಇವರೆಲ್ಲ ಆ ಉದ್ಯಮಿಯ ಕೊಲೆಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಇದರಲ್ಲಿ ಕೊಲೆಯಾದ ವ್ಯಕ್ತಿಗೂ ಆ ಮೂರು ಜನರಿಗೂ ಇರುವ ಸಂಬಂದವನ್ನು ತನಿಖೆ ಮಾಡುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗುತ್ತದೆ. ಹೀಗೆ ಇಡೀ ಚಿತ್ರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಸಾಗುತ್ತದೆ. ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಪ್ರದರ್ಶನದ ನಂತರ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಅರವಿಂದ್ ಕಾಮತ್ ಮಾತನಾಡುತ್ತ 2020ರ ಆರಂಭದಲ್ಲೇ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನಿತ್ತು. ಕೊರೋನಾ ಅದಕ್ಕೆ ಅಡ್ಡಿಯಾಯಿತು. ಈಗ ಮತ್ತೆ ಹೊಸ ಎನರ್ಜಿಯೊಂದಿಗೆ ವಾಪಸ್ ಬಂದಿದ್ದೇವೆ. ನ. 27ಕ್ಕೆ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ಆರಂಭದಲ್ಲಿ ನನ್ನ ಗುರುಗಳಾದ ಪ್ರಕಾಶ್ ಬೆಳವಾಡಿ ಅವರಲ್ಲಿ ಈ ಕಥೆಯನ್ನು ತೆಗೆದುಕೊಂಡು ಹೋದಾಗ ನನಗೆ ಬೆನ್ನುತಟ್ಟಿ ಎಲ್ಲಾ ವಿಷಯದಲ್ಲೂ ಬೆಂಬಲಿಸಿದರು. ಈಗ ಚಿತ್ರದ ಬಿಡುಗಡೆಗರ ಬಾಮ ಹರೀಶ್ ಅವರೂ ಸಹಕಾರ ನೀಡುತ್ತಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರನಾಡು, ಅಂಜು ಹಾಗೂ ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಲೀಡ್ರೋಲ್ ಅಂತ ಇಲ್ಲ, ಆರೇಳು ಮುಖ್ಯ ಪಾತ್ರಗಳಿವೆ ಅಷ್ಟೇ. ಆ ಎಲ್ಲ ಪಾತ್ರಗಳೂ ಕಥೆಯ ಸುತ್ತ ಸುತ್ತುತ್ತವೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ಮಾತನಾಡಿ ಕನ್ನಡದಲ್ಲೇ ಒಂದು ವಿಶೇಷ ಜಾನರ್ ಚಿತ್ರವಿದು, ಇಲ್ಲಿ ಬಹಳಷ್ಟು ಬೋಲ್ಡ್ ಪಾತ್ರಗಳನ್ನು ನಿರ್ದೇಶಕ ಅರವಿಂದ್ ಸೃಷ್ಟಿಸಿದ್ದಾರೆ, ಸಿಂಕ್ ಸೌಂಡ್ನಲ್ಲಿ ಮಾಡಿರುವ ಸಿನಿಮಾವಿದು. ಅವಿನಾಶ್ ಅವರು ಒಬ್ಬ ಉತ್ತಮ ಕಲಾವಿದ, ಆದರೆ ಮುಂಗೋಪಿ, ಈ ಹೊಸ ಹುಡುಗರ ಜೊತೆ ತುಂಬಾನೇ ಹೆಣಗಿದ್ದಾರೆ. ಸಂಯುಕ್ತ, ಅಂಜು ಕೂಡ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ ಎಂದು ಹೇಳಿದರು. ನಂತರ ಅವಿನಾಶ್ ಮಾತನಾಡಿ ಅರವಿಂದ್ 2 ವರ್ಷಗಳ ಹಿಂದೆ ನನ್ನಬಳಿ ಬಂದು ಈ ಕಥೆ ಹೇಳಿದಾಗ ಮೊದಲ ಚಿತ್ರದಲ್ಲೇ ತುಂಬಾ ರಿಸ್ಕ್ ತಗೋತಿದಾರೆ ಅನ್ನಿಸಿತು. ನಾನು ಈವರೆಗೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿದ್ದರೂ, ಈಥರದ ಪಾತ್ರ ಮಾಡಿರಲಿಲ್ಲ. ಪ್ರತಿಯೊಬ್ಬರೂ ತುಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಈ ಥರದ ಸಿನಿಮಾಗಳು ಬಂದರೆ ಕಲಾವಿದರಿಗೂ ಹೊಸ ಹುರುಪು ಬರುತ್ತದೆ ಎಂದು ಹೇಳಿದರು. ನಾಯಕಿ ಸಂಯುಕ್ತ ಹೊರನಾಡು ಮಾತನಾಡುತ್ತ 2 ವರ್ಷಗಳ ಹಿಂದೆ ಅರವಿಂದ್ ಅವರು ನನಗೆ ಏನು ಕಥೆ ಹೇಳಿದ್ದರೋ ಅದಕ್ಕಿಂತ ಹೆಚ್ಚಿಗೇನೇ ತೆರೆಮೇಲೆ ತಂದಿದ್ದಾರೆ. ಇಂಥ ಸಬ್ಜೆಕ್ಟ್ ಕೈಗೆತ್ತಿಕೊಳ್ಳಲು ತುಂಬಾ ಧೈರ್ಯ ಇರಬೇಕು ಎಂದು ನಿರ್ದೇಶಕರ ಕೆಸಲವನ್ನು ಹೊಗಳಿದರು. ಚಿತ್ರದ ಛಾಯಾಗ್ರಾಹಕ ಬಾಲಾಜಿ ಮನೋಹರ್ ಮಾತನಾಡಿ ನಾವೆಲ್ಲ ಪ್ರಕಾಶ್ ಅವರ ಗರಡಿಯಿಂದಲೇ ಬಂದವರು.
ನಿರ್ದೇಶಕರು ಸುಮಾರು 30ದಿನ ನನ್ನ ಜೊತೆ ಕೂತು, ಪ್ರತಿಸೀನ್ ಹೀಗೇ ಬರಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಂಡಿದ್ದರು. ಹಾಗಾಗಿ ಶೂಟಿಂಗ್ ಸಮಯದಲ್ಲಿ ಗೊಂದಲ ಉಂಟಾಗಲಿಲ್ಲ. ಉದಿತ್ ಅವರು ತಮ್ಮ ಸಂಗೀತದಲ್ಲಿ ಅಮೇಜಿಂಗ್ ವರ್ಕ್ ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೂ ಮೊದಲು ನಟ ಸುದೀಪ್ ಅವರು ಅರಿಷಡ್ವರ್ಗ ಟ್ರೈಲರನ್ನು ಆನ್ಲೈನ್ನಲ್ಲಿ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. 2019ರಲ್ಲಿ ಲಂಡನ್ ವಲ್ಡರ್ï ಪ್ರೀಮಿಯರ್ ಮತ್ತು ಸಿಂಗಾಪುರದಲ್ಲಿ ನಡೆದ ಸೌತ್ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಅರಿಷಡ್ವರ್ಗ ಅಲ್ಲೆಲ್ಲಾ ಮೆಚ್ಚುಗೆ ಪಡೆದುಕೊಂಡಿದೆ. ಕನಸು ಟಾಕೀಸ್ನ ಆನಂದ್ ಹಾಗೂ ಅವರ ಸ್ನೇಹಿತರ ಜೊತೆ ಅರವಿಂದ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
No Comment! Be the first one.