ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಗಣಪ ಖ್ಯಾತಿಯ ಪ್ರಿಯಾಂಕ ನಟಿಸಿರುವ ಹೊಸ ಸಿನಿಮಾ ಅರ್ಜುನ್ ಗೌಡ. ಈ ಚಿತ್ರವನ್ನು ಕೋಟಿ ನಿರ್ಮಾಪಕ ರಾಮು ನಿರ್ಮಾಣ ಮಾಡುತ್ತಿದ್ದು, ಶಂಕರ್ ನಿರ್ದೆಶನ ಮಾಡುತ್ತಿದ್ದಾರೆ. ವಿಚಾರ ಮಾಡಿ ನೋಡಿದರೆ ಪ್ರಜ್ವಲ್ ದೇವರಾಜ್ ಗೆ ಈ ವರ್ಷ ಬಹಳ ಲಕ್ಕಿ ಕೂಡ. ಸಾಲು ಸಾಲು ಸಿನಿಮಾಗಳನ್ನು ಹೊಂದಿರುವ ಪ್ರಜ್ವಲ್ ಫುಲ್ ಬ್ಯುಸಿಯಾಗಿದ್ದಾರೆ. ಇನ್ಸ್ ಪೆಕ್ಟರ್ ವಿಕ್ರಮ್, ಜಂಟಲ್ ಮನ್, ಅರ್ಜುನ್ ಗೌಡ ಚಿತ್ರಗಳಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.
ಸದ್ಯ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಅರ್ಜುನ್ ಗೌಡದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಲವ್ ಅಂಡ್ ರೊಮ್ಯಾಂಟಿಕ್ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್ ಗೆಳೆಯ ಚಿತ್ರದ ನಂತರ ಅರ್ಜುನ್ ಗೌಡ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಡಿಫರೆಂಟ್ ಮ್ಯಾನರಿಜಂ ನ ಜತೆಗೆ ಖಡಕ್ ಡೈಲಾಗುಗಳು ಪ್ರೇಕ್ಷಕರನ್ನು ಸೆಳೆಯುವಂತಿದೆ.
No Comment! Be the first one.