ಅರ್ಜುನ್ ಜನ್ಯಾ ಕನ್ನಡ ಚಿತ್ರರಂಗದ ಅತ್ಯದ್ಭುತ ಪ್ರತಿಭಾವಂತ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹಿಟ್ ನೀಡಿರುವ ಸಂಗೀತ ನಿರ್ದೇಶಕ. ತೀರಾ ಸೊನ್ನೆಯಿಂದ ಶುರು ಮಾಡಿ, ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಹಂತ ಹಂತವಾಗಿ ಹೆಜ್ಜೆಯಿಟ್ಟು ಮ್ಯಾಜಿಕಲ್ ಕಂಪೋಸರ್ ಅನ್ನಿಸಿಕೊಂಡವರು ಅರ್ಜುನ್.  ಕಳೆದ ಒಂದು ದಶಕದಲ್ಲಿ ಅತ್ಯುತ್ತಮ ಹಾಡುಗಳನ್ನು ನೀಡಿ ಜನಮನ ಗೆದ್ದಿದ್ದಾರೆ. ಹೀಗಿದ್ದೂ ಕೆಲವು ಟೀಕೆಗಳು ಅವರ ಅಂತರಂಗವನ್ನು ‘ಯಾಕೆ ಹೀಗಾಗುತ್ತಿದೆ’ ಎಂದು ಪ್ರಶ್ನೆ ಮಾಡುತ್ತಿವೆ. ಅಂಥವುಗಳಿಗೆ ಸ್ವತಃ ಅರ್ಜುನ್ ಇಲ್ಲಿ ಉತ್ತರಿಸಿದ್ದಾರೆ.

ಗೆದ್ದಾಗಲೂ ಟೀಕಿಸುತ್ತಾರಾ?

ಒಳ್ಳೇದು ಬಂದಾಗ ಸ್ವೀಕರಿಸಿದ್ದೇನೆ ಹಾಗೆ ಕೆಟ್ಟದ್ದು ಬಂದಾಗಲೂ ಸ್ವೀಕರಿಸಬೇಕು. ಎಲ್ಲರ ಸಿನಿಮಾನೂ ಒಂದೇ ಎಂಬ ಭಾವನೆಯಲ್ಲಿ ಮಾಡುತ್ತೇನೆ. ೩-೪ ವರ್ಷದಿಂದಲೂ ಟಿವಿ ಚಾನಲ್‌ನಲ್ಲಿದ್ದೇನೆ. ನನ್ನ ೧೫ ವರ್ಷದ ಸಿನಿಮಾ ಜರ್ನಿಯಲ್ಲಿ ಈ ವರ್ಷವೇ ನಾನು ಅಮೆರಿಕಾಕ್ಕೆ ಹೋಗಿರೋದು ಇದೇ ಮೊದಲನೇ ಬಾರಿ. ಎಲ್ಲರೂ ತಿಂಗಳಿಗೆ ೧೦ ಶೋ ಮಾಡಿದರೆ ನಾನು ವರ್ಷಕ್ಕೆ ೧೦ ಮಾಡಿಲ್ಲ.

ನೀವು ಕೈಗೆ ಸಿಗೋದು ಕಷ್ಟಾನಾ?

ಎಲ್ಲ ನಿರ್ಮಾಪಕರ ಫೋನ್‌ಗೂ ಉತ್ತರಿಸುತ್ತೇನೆ. ಯಾವ ನಿರ್ಮಾಪಕರ ಫೋನ್ ಅನ್ನೂ ರಿಸೀವ್ ಮಾಡದೆ ಆಟ ಆಡಿಸುವುದೂ ಇಲ್ಲ. ಯಾವ ನಿರ್ಮಾಪಕರಿಗೂ ನನಗೆ ಇಷ್ಟೇ ಪೇಮೆಂಟ್ ಕೊಡಬೇಕೆಂದು ಡಿಮ್ಯಾಂಡ್ ಮಾಡಿಲ್ಲ. ಯಾವ ನಿರ್ಮಾಪಕರಿಗೂ ನನಗೆ ಸಿನಿಮಾ ಕೊಡಿ ಅಂತ ಕೇಳಿದ್ದೂ ಇಲ್ಲ. ನನಗೆ ಹೆಚ್ಚು ಮಾತನಾಡೋಕೂ ಸಹ ಬರೋಲ್ಲ. ಪಾರ್ಟಿ ಅಟೆಂಡ್ ಮಾಡೋದಾಗಲೀ, ಪ್ರಸ್ ಮೀಟ್ ಅಟೆಂಡ್ ಮಾಡೋದಾಗಲೀ ಅಪರೂಪ.

ನೀವು ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದೀರ ಅಲ್ವಾ?

ಈಗ ನನ್ನ ಕೈಯಲ್ಲಿ 12 ಸಿನಿಮಾಗಳಿವೆ. ತಾಯಿ ಚಾಮುಂಡೇಶ್ವರಿ ಮೇಲಾಣೆ ಇದುವರೆಗೂ ನಾನು ಮಾಡಿರುವ ಯಾವ ಸಿನಿಮಾವನ್ನೂ ನಾನು ಯಾರ ಹತ್ತಿರವೂ ಕೇಳಿ ಪಡೆದಿರುವಂತದ್ದಲ್ಲ. ಎಲ್ಲ ಅವಕಾಶಗಳೂ ಅದಾಗಿಯೇ ಒದಗಿ ಬಂದಿರುವಂತದ್ದು.  ವರ್ಷಕ್ಕೆ ಸುಮಾರು ೧೫ ಸಿನಿಮಾ ಮ್ಯೂಸಿಕ್ ಮಾಡುತ್ತಿದ್ದೇನೆ. ಇದುವರೆಗೂ ನನ್ನ ಕೆರೆಯರ್‌ನಲ್ಲಿ ದರ್ಶನ್ ಸರ್ ಅವರ ೩ ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ್ದೇನೆ. ಚಕ್ರವರ್ತಿ ಸಿನಿಮಾದ ಒಂದು ಮಳೆಬಿಲ್ಲು ಹಾಡು ೩ ಬಿಲಿಯನ್ ಮುಟ್ಟಿದೆ. ತಾರಖ್ ಸಿನಿಮಾದ ಹಾಡುಗಳು ತುಂಬಾ ಡಿಫರೆಂಟ್ ಆಗಿ ಬಂದಿದೆ ಈ ರೀತಿಯ ಮ್ಯೂಸಿಕ್ ಮಾಡಿ ಎಂಬುದಾಗಿ ಬಹಳ ಜನ ಕಮೆಂಟ್ ಮಾಡಿದ್ದಾರೆ.

ಎಲ್ಲ ಹೀರೋಗಳ ಸಿನಿಮಾಗೂ ಸಂಗೀತ ಸಂಯೋಜಿಸುವಾಗ ಕಷ್ಟ ಅನಿಸಲ್ವಾ?

ಆ ಹೀರೋ ಸಿನಿಮಾ ಚೆನ್ನಾಗಿ ಮಾಡ್ತೀನಿ, ಈ ಹೀರೋ ಸಿನಿಮಾ ಚೆನ್ನಾಗಿ ಮಾಡಲ್ಲ ಅಂತೆಲ್ಲಾ ಏನೂ ಇಲ್ಲ. ಎಲ್ಲರ ಸಿನಿಮಾನೂ ಚೆನ್ನಾಗೇ ಬರಬೇಕು ಅನ್ನೋದೇ ನನ್ನಾಸೆ. ನನ್ನನ್ನು ನಂಬಿ ಸುಮಾರು ೨೫೦ ಕುಟುಂಬಗಳಿವೆ. ಹಾಡುಗಳು ಚೆನ್ನಾಗಿವೆ ಎಂಬುದನ್ನು ಜನ ನಿರ್ಧಾರ ಮಾಡಿದ ಮೇಲೆ ಮುಗೀತು. ರಾಬರ್ಟ್ ಸಿನಿಮಾ ಹಾಡುಗಳೂ ಸಹ ಬಹಳ ಚೆನ್ನಾಗಿ ಮೂಡಿಬಂದಿದೆ. ನೀನಾಸಂ ಸತೀಶ್, ಶರಣ್, ದರ್ಶನ್, ಸುದೀಪ್, ಶಿವಣ್ಣ ಇವರೆಲ್ಲರಿಗೂ ಹಿಟ್ ಸಾಂಗ್ ಕೊಟ್ಟಿದ್ದೀನಿ. ಚಕ್ರವರ್ತಿ ಸಿನಿಮಾಗೆ ಮುನ್ನ ಸುದೀಪ್ ಸರ್ ಅವರಿಗೆ ೧೦ ಸಿನಿಮಾ ಮಾಡಿದ್ದೇನೆ. ಕೆಡಿಸಬೇಕೆಂದಿದ್ದರೆ, ಚಕ್ರವರ್ತಿ ಸಿನಿಮಾವನ್ನೇ ಮಾಡಬಹುದಿತ್ತು. ಆದರೆ ನಾನು ಯಾರಿಗೂ ಹಾಗೆ ಮಾಡುವವನಲ್ಲ. ದರ್ಶನ್ ಸರ್ ಹಾಗೂ ಸುದೀಪ್ ಸರ್ ಇಬ್ಬರೂ ಎಲ್ಲರಿಗೂ ಒಳ್ಳೆಯ ಮ್ಯೂಸಿಕ್ ಮಾಡು ಅಂತಲೇ ನನಗೆ ಯಾವಾಗಲೂ ಹೇಳುತ್ತಾರೆ.

Romantic songs of Decade 20 songs on list with ONDU MALE BILLU TOP 1

 

2019 AJ Hits
1.Marethu hoyithe naneya hajari (AMAR)(BEST SONG IN WORLDS TOP 100 songs)
2.Summane (AMAR)
3.Kodagu song(AMAR)(VIRAL IN KODAGU)
4.Pailwan Tittel track (PAILWAN)
5.Doresani (PAILWAN)
6.Kanne Maniye (PAILWAN)
7.Be Ba Barathe (BHARATHE)
8.Jayarathnakara (BHARATHE)
9.Yalidhe Eli thanaka titteltrack(YALIDHE ELI THANAKA)
10.Shyane Love (ODEYA)
11.Kaneyagiruve nanu (ODEYA)
12.99 (It was my 100th film) (First time recorded in BUDHAPEST HUNGRY ORCHESTRA for a kannada film.
13.Premier Padmini (My favourite film and got very good appreciation for BGM)
14.Yo Yo song (BHARATHE)
CG ARUN

ಫೋರ್ ವಾಲ್ಸ್ ಜೊತೆಗೆ ಟೂ ನೈಟೀಸ್

Previous article

You may also like

Comments

Leave a reply

Your email address will not be published. Required fields are marked *