ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ… ಈ ಹಾಡನ್ನು ಯಾರಾದರೂ ಮರೆಯುವುದುಂಟಾ? ಖಂಡಿತ ಇಲ್ಲ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಜನಪ್ರಿಯ ಹಾಡು ಇದು. ಈ ಹಾಡಿನ ಸಾಲು ಈಗ ಸಿನಿಮಾವಾಗಿದೆ. ಅದೇ ಅರ್ಜುನ ಸನ್ಯಾಸಿ. ಒಂದಷ್ಟು ಯುವ ಪ್ರತಿಭೆಗಳು ಜೊತೆಗೂಡಿ ಅರ್ಜುನ ಸನ್ಯಾಸಿ ಎಂಬ ಪಕ್ಕಾ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾ ಮಾಡಿದ್ದಾರೆ. ಈ ಹಿಂದೆ ರುದ್ರಾಕ್ಷಿಪುರ ಎಂಬ ಸಿನಿಮಾ ಮಾಡಿದ್ದ ಈಶ್ವರ್ ಪೊಲಂಕಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದೇ ರುದ್ರಾಕ್ಷಿಪುರ ಸಿನಿಮಾದಲ್ಲಿ ಸಹ‌ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಸಿ.ಸಿ.ರಾವ್ ಅರ್ಜುನ ಸನ್ಯಾಸಿ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಟೈಟಲ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಅರ್ಜುನ ಸನ್ಯಾಸಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಅನಾವರಣವಾಗಿರುವ ಹಾಡು ಕೇಳುಗರ ಗಮನ ಸೆಳೆಯುತ್ತಿದೆ. ಮದುವೆ ಬಗ್ಗೆ ಅರ್ಥಪೂರ್ಣವಾದ ಚೆಂದದ ಸಾಲುಗಳನ್ನು ಅನುರಂಜನ್ ಹೆಚ್ ಆರ್ ಜೋಡಿಸಿದ್ರೆ, ಕೆ ಹೇಮಂತ್ ಕುಮಾರ್ ಇಂಪಾದ ಮ್ಯೂಸಿಕ್ ನೀಡಿದ್ದು, ಶಕ್ತಿಶ್ರೀ ಗೋಪಾಲನ್ ಹಾಡಿಗೆ ಧ್ವನಿಯಾಗಿದ್ದಾರೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಹಾಡು ಏಕಕಾಲಕ್ಕೆ ರಿಲೀಸ್ ಆಗಿದೆ. ತೆಲುಗಿನಲ್ಲಿ ಪ್ರವರ್ಷ್ ಮಲ್ಲಾಡಿ ಲಿರಿಕ್ಸ್ ಬರೆದಿದ್ದು, ಸಿಂಧೂರಿ ವಿಶಾಲ್ ಧ್ವನಿಯಾದ್ರೆ, ಕೆ ಹೇಮಂತ್ ಕುಮಾರ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿರೇಶ್, ರವಿ ಬೆಳಗುಡಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.

ಸಿಸಿ ರಾವ್ ನಾಯಕನಾಗಿ  ಬಣ್ಣ ಹಚ್ಚಿದ್ರೆ, ಸೌಂದರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿನಯ, ನಾಗೇಂದ್ರ ಷಾ, ಕಾಮಿಡಿ ಕಿಲಾಡಿ ಸೂರಜ್, ವಾಣಿ, ರೂಪ ರಾಯಪ್ಪ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಅಂದಹಾಗೇ ಅರ್ಜುನ ಸನ್ಯಾಸಿ ಸಿನಿಮಾದ ಎಲ್ಲಾ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೆಡಿಯಾಗ್ತಿರುವ ಈ ಸಿನಿಮಾಗೆ ಈಶ್ವರ್ ಪೊಲಂಕಿ ನಿರ್ದೇಶನ ಮಾಡುವುದರ ಒಟ್ಟಿಗೆ ತಮ್ಮದೇ ಪೊಲಂಕಿ ಫ್ಯಾಷನ್ ಪಿಚ್ಚರ್ಸ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇವ್ರ ಜೊತೆಗೆ ಗುರುಮೂರ್ತಿ ಹೆಗ್ಡೆ ಕನ್ನಿಪಾಲ್, ನೇತ್ರರಾಜ್ ಭಾರತೀಪುರ, ಅನುರಂಜನ್ ಹೆಚ್ ಆರ್ ಕೊ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗಾಳಿಪಟದ ಸುತ್ತ ಗಾಳಿ ಸುದ್ದಿ!

Previous article

“ರೈಡರ್” ಡಿಸೆಂಬರ್ 24ರಂದು ತೆರೆಗೆ…

Next article

You may also like

Comments

Leave a reply